ಉಡುಪಿ:ಐ.ಟಿ.ಐ ಪ್ರವೇಶಾತಿಗೆ ಅರ್ಜಿ ಆಹ್ವಾನ

ಉಡುಪಿ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಣಿಪಾಲ, ಉಡುಪಿ (ಐ.ಟಿ.ಐ) ಸಂಸ್ಥೆಯಲ್ಲಿ, 2019 ನೇ ಸಾಲಿನ ಪ್ರವೇಶಕ್ಕಾಗಿ ಮೆಕ್ಯಾನಿಕ್ ಡೀಸೆಲ್, ಸಿಓಪಿಎ (ಕಂಪ್ಯೂಟರ್) ಮತ್ತು ಫಿಟ್ಟರ್ ಐ.ಟಿ.ಐ ಕೋರ್ಸ್‍ಗಳಲ್ಲಿ ಕೆಲವು ಸ್ಥಾನಗಳು ಬಾಕಿ ಉಳಿದಿದ್ದು, ಆ ವೃತ್ತಿಗಳಲ್ಲಿ ಪ್ರವೇಶ ಬಯಸುವ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಅಂತಿಮ ಸುತ್ತಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಮಣಿಪಾಲದ ಪ್ರಗತಿನಗರದಲ್ಲಿರುವ ಐ.ಟಿ.ಐ ಕಚೇರಿಗೆ ಖುದ್ದಾಗಿ ದಾಖಲಾತಿಗಳೊಂದಿಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 0820-2986145 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ