ಉಡುಪಿ: ರಾಜ್ಯದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು, ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು.
![](https://udupixpress.com/wp-content/uploads/2024/11/1000045537-1024x576.jpg)
ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಭಟ್ಟರು.ಈ ವೇಳೆ ಮಾತನಾಡಿದ ಮುಖಂಡ ರಮೇಶ್ ಕಾಂಚನ್, ರಾಜ್ಯದಲ್ಲಿ ಉಪಚುನಾವಣೆ ಸಂದರ್ಭ ಬಿಜೆಪಿ ಎಲ್ಲ ರೀತಿಯ ಅಪಪ್ರಚಾರವನ್ನು ನಡೆಸಿತು. ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಅಪ ಪ್ರಚಾರ ನಡೆಸಿದರೂ ಕೂಡ ರಾಜ್ಯದ ಜನ ತಕ್ಕ ಉತ್ತರ ನೀಡಿದ್ದಾರೆ.
![](https://udupixpress.com/wp-content/uploads/2024/11/1000045533-1024x576.jpg)
ರಾಜ್ಯ ಸರಕಾರಕ್ಕೆ ಮತದಾರರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ಅಪಪ್ರಚಾರಕ್ಕೆ ಜಾಗ ಇಲ್ಲ ಎಂಬ ಸಂದೇಶವನ್ನು ರಾಜ್ಯದ ಮತದಾರರು ನೀಡಿದ್ದಾರೆ ಎಂದು ಹೇಳಿದರು.