ಕೊಲ್ಲೂರು: ಕೆರಾಡಿ ಗ್ರಾಮದ ಅರೆಕಲ್ಲು ಎಂಬಲ್ಲಿ ಟ್ಯಾಕ್ಟರೊಂದು ಪಲ್ಟಿಯಾದ ಪರಿಣಾಮ ಚಾಲಕನೊಬ್ಬ ಮೃತಪಟ್ಟ ಘಟನೆ ನ.19ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಮಂಜುನಾಥ(37) ಎಂದು ಗುರುತಿಸಲಾಗಿದೆ.
ಕೆರಾಡಿ ಕಡೆಯಿಂದ ಚಿತ್ತೂರು ಪೆಟ್ರೋಲ್ ಬಂಕ್ ಕಡೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್, ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತಗ್ಗು ಜಾಗದಲ್ಲಿ ಅಡ್ಡ ಬಿತ್ತೆನ್ನಲಾಗಿದೆ. ಇದರಿದ ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ವೇಳೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.