ಸುಮಾರು 500 ವರ್ಷಗಳ ಇತಿಹಾಸವಿರುವ ಐತಿಹಾಸಿಕ ಬಿಲ್ಲಾಡಿ ದೊಡ್ಮನೆ ಕುಟುಂಬಸ್ಥರ ನೇತ್ರತ್ವದಲ್ಲಿ ನಡೆಯುವ ಉದ್ಭವ ಮಹಾಗಣಪತಿ ಕೇಚರಾಹುತ ಕಂಬಳ ಮಹೋತ್ಸವವು 22-11-2024 ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಶುಭ ಮುಹೂರ್ತದಲ್ಲಿ ಪರಂಪರೆಯ ಸಾಂಪ್ರದಾಯದಂತೆ ಘೋರಿ ಮೆಟ್ಟುವುದರ ಮೂಲಕ ಉದ್ಘಾಟನೆಗೊಳಲಿದೆ.
ಮದ್ಯಾಹ್ನ 4.30 ಕ್ಕೆ ಕೋಣಗಳ ಸ್ಪರ್ದೆ ಆರಂಭಗೊಂಡು ರಾತ್ರಿ 9.30 ರ ತನಕ ಹೊನಲು ಬೆಳಕಿನಲ್ಲಿ ನಡೆಯಲಿದ್ದು,ರಂಗ ಪೂಜೆ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಸ್ಪರ್ದೆಗಳು ಈ ಕೆಳಗಿನಂತಿದೆ.
ಹಲಗೆ ಓಟ :ಪ್ರಥಮ :12000 + ಶಾಶ್ವತ ಫಲಕ ದ್ವಿತೀಯ 10000 + ಶಾಶ್ವತ ಫಲಕ.
ಹಗ್ಗ ಹಿರಿಯ : ಪ್ರಥಮ :10000 + ಶಾಶ್ವತ ಫಲಕ ದ್ವಿತೀಯ 8000 ಶಾಶ್ವತ ಫಲಕ.
ಹಗ್ಗ ಕಿರಿಯ : ಪ್ರಥಮ 8000+ ಶಾಶ್ವತ ಫಲಕ, ದ್ವಿತೀಯ 6000 + ಶಾಶ್ವತ ಫಲಕ.
ಸಬ್ ಜೂನಿಯರ್ ಪ್ರಥಮ :8000 + ಶಾಶ್ವತ ಫಲಕ ದ್ವಿತೀಯ 6000 + ಶಾಶ್ವತ ಫಲಕ.
ಸಂಪೂರ್ಣ ಕಂಬಳವು ಸೆನ್ಸಾರ್ ವ್ಯವಸ್ಥೆಯಲ್ಲಿ ನಡೆಲಿದ್ದು ಕೊನೆಯದಾಗಿ ಮನೆಯ ಕೋಣಗಳನ್ನು ಸೂಡಿ ಬೆಳಕಿನಲ್ಲಿ ಓಡಿಸುವುದರಮೂಲಕ ಕಂಬಳಕ್ಕೆ ತೆರೆ ಬೀಳಲಿದೆ ಎಂದು ಕಂಬಳ ಸಂಘಟಕ ಪ್ರಥ್ವೀರಾಜ್ ಬಿಲ್ಲಾಡಿ ತಿಳಿಸಿದ್ದಾರೆ.