ಮಹಾರಾಷ್ಟ್ರ:ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಸಮಾಜ ಸೇವಾ ಮಾಣಿಕ್ಯ ರಾಷ್ಟೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮಹಾರಾಷ್ಟ್ರ: ತುಳುಕೂಟ ಪುಣೆ (ರಿ)ವತಿಯಿಂದ ಬೊಳ್ಳಿ ಪರ್ಬ-2024 ತುಳುನಾಡ ಜಾತ್ರೆ ತುಳುಕೂಟ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿ ತನ್ನದೆ ಆದ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತ ದೇಶ-ವಿದೇಶದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಬಟರ್ ಫ್ಲೈ ಗೆಸ್ಟ್ ಹೌಸ್ ಇದರ ಆಡಳಿತ ನಿರ್ದೇಶಕರಾದ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೊಡಲ್ಪಡುವ ಸಮಾಜ ಸೇವಾ ಮಾಣಿಕ್ಯ ರಾಷ್ಟೀಯ ಪ್ರಶಸ್ತಿಯನ್ನು ಪುಣೆಯ ಬಾಣೆರ್ ನ ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನಾಡೋಜ ಡಾ.ಜಿ ಶಂಕರ್ ವೇದಿಕೆಯಲ್ಲಿ ರಾಜಕೀಯ ಮುಖಂಡರು ಹಾಗೂ ದೇಶ-ವಿದೇಶದ ಅನೇಕ ಗಣ್ಯತಿಗಣ್ಯರು ಸಾವಿರಾರು ಜನಸಾಮಾನ್ಯರ ಮುಂದೆ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಿವ್ಯ ಉಪಸ್ಥಿತಿ ಪರಮಾಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಓಡಿಯೂರು,ಆಶೀರ್ವಾಚನ ಶ್ರೀ ಅನಂತ ಕೃಷ್ಣ ಅಸ್ರಣ್ಣ ಕಟೀಲು ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣೆ ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ತುಳುಕೂಟ ರಜತ ಮಹೋತ್ಸವ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ವಹಿಸಿದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿ ಫ್ಯಾಮಿಲಿ ಟ್ರಸ್ಟ್ ಸ್ಥಾಪಕದ್ಯಾಕ್ಷರಾದ ನಾಡೋಜ ಡಾ.ಜಿ ಶಂಕರ್, ಎಂ.ಆರ್. ಜಿ ಗ್ರೂಪ್ಸ್ ಡಾ.ಪ್ರಕಾಶ್ ಶೆಟ್ಟಿ, ಜಾಗಾತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷರಾದ ಎ ಸಿ ಬಂಡಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ.ಕೆ ಧರಣಿದೇವಿ ಮಾಲಗತ್ತಿ ಐ.ಪಿ.ಎಸ್ ,ಅನಿವಾಸಿ ಭಾರತೀಯ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಮುನಿಯಲು ಟ್ರಸ್ಟ್ ಉದಯಕುಮಾರ್ ಶೆಟ್ಟಿ ಮುನಿಯಲು, ಉಡುಪಿ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು,ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಮೊಗವೀರ ಸಭಾ ಅಧ್ಯಕ್ಷರಾದ ಶ್ರೀ ಜಯ ಕೋಟ್ಯಾನ್,ತುಳುಕೂಟ ಪುಣೆ ಉಪಾಧ್ಯಕ್ಷರಾದ ಉದಯ ಶೆಟ್ಟಿ ಕಳತ್ತೂರು,ಪ್ರ.ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು, ರವಿಶಂಕರ್ ಶೆಟ್ಟಿ ಬಡಾಜೆ ಬಂಟ್ವಾಳ ,ಭಾರತ್ ಕೋ ಆಪರೇಟಿವ್ ಮುಂಬೈ ಕಾರ್ಯಧ್ಯಕ್ಷರಾದ ಸೂರ್ಯಕಾಂತ ಸುವರ್ಣ, ಹಾಗೂ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.