ಕಿನ್ನಿಮೂಲ್ಕಿಯಲ್ಲಿ ನೇತ್ರಜ್ಯೋತಿ ಸಂಸ್ಥೆಗಳ ನೂತನ ಕಟ್ಟಡ ಶುಭಾರಂಭ.

ಉಡುಪಿ: ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಸೈನ್ಸಸ್ ಕಾಲೇಜು, ನೇತ್ರ ಜ್ಯೋತಿ ಫಿಸಿಯೋಥೆರಪಿ ಕಾಲೇಜು, ನೇತ್ರ ಜ್ಯೋತಿ ಕಾಲೇಜು ವತಿಯಿಂದ 76ಬಡಗಬೆಟ್ಟು ಕಿನ್ನಿಮೂಲ್ಕಿಯಲ್ಲಿ ನೇತ್ರ ಜ್ಯೋತಿ ಸಂಸ್ಥೆಗಳ ನೂತನ ಕಟ್ಟಡ ಶುಕ್ರವಾರ ಉದ್ಘಾಟನೆಗೊಂಡಿತು.

ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ನೇತ್ರಜ್ಯೋತಿ ಆಸ್ಪತ್ರೆಯಿಂದ ಸಮಾಜಕ್ಕೆ ಒಳ್ಳೆಯ ಸೇವಾಕಾರ್ಯ ಪ್ರಾಪ್ತಿ ಆಗಲಿ. ದೇವರು ಕರುಣಿಸಿದ ಕಣ್ಣು ಜಗತ್ತಿಗೆ ದಿವ್ಯ ದೃಷ್ಟಿ ನೀಡುವಂತದ್ದು. ಕೃಷ್ಣನೂರಿಗೆ ಡಾ. ಕೃಷ್ಣ ಪ್ರಸಾದ್ ಅವರು ಕಣ್ಣಿನ ಆಸ್ಪತ್ರೆಯ ಮೂಲಕ ಅಮೂಲ್ಯ ಸೇವೆ ನೀಡಿದ್ದಾರೆ ಎಂದು ಶುಭ ಹಾರೈಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ನೇತ್ರದಾನ ಹೆಸರಿನಲ್ಲಿ ಡಾ. ಕೃಷ್ಣಪ್ರಸಾದರ ಅನುಭವಗಳು ಶಕ್ತಿಯಾಗಿ ರೂಪುಗೊಳ್ಳಲಿ. ರಾಜ್ಯ ದೇಶಕ್ಕೆ ಗೌರವ ತಂದು ಕೊಡುವ ವೈದ್ಯಕೀಯ ಸೇವೆ ದೊರಕಿ ಉನ್ನತ ಗೌರವಕ್ಕೆ ಪಾತ್ರರಾಗಲಿ ಎಂದರು.

ಗುಜರಾತ್ ವಡನಗರ ಸರ್ವೋದಯ ಸೇವಾ ಟ್ರಸ್ಟ್ ಮುಖ್ಯಸ್ಥ ಸೋಮುಬಾಯ್ ಮೋದಿ ಮಾತನಾಡಿ ನೇತ್ರ ಚಿಕಿತ್ಸೆ ಮತ್ತು ನೇತ್ರದಾನದಿಂದ ಅಂದತ್ವ ನಿವಾರಿಸಲು ಸಾಧ್ಯ ಇಲ್ಲಿನ ಈ ಸಂಸ್ಥೆಯ ಸೇವೆ ಜಗದಗಲಕ್ಕೆ ವಿಸ್ತರಿಸಿ ಉತ್ತಮ ಸೇವೆ ನೀಡುವಂತಾಗಲಿ ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ನೇತ್ರ ಜ್ಯೋತಿ ಆಸ್ಪತ್ರೆ ನೂರಾರು ನೇತ್ರದಾನ ಮಾಡಿದ ಹೆಗ್ಗಳಿಕೆಯ ಸಂಸ್ಥೆ. ದ್ರಷ್ಟಿ ಪ್ರಕಾರವೇ ಕೆಲಸವು ಮಾಡುವಂತಾಗಲಿ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಎ.ವಿ. ಬಾಳಿಗ ಆಸತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್, ಜ್ಯೋತಿಷಿ ವಿ. ಕಬಿಯಾಡಿ ಜಯರಾಮ ಆಚಾರ್ಯ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಪೂರ್, ಶಾಸಕ ಯಶ್ ಪಾಲ್ ಸುವರ್ಣ, ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಸದಸ್ಯರಾದ ವಿಜಯ ಪೂಜಾರಿ, ಅಮೃತ ಕೃಷ್ಣಮೂರ್ತಿ, ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ನೇತ್ರಜ್ಯೋತಿ ಟ್ರಸ್ಟ್ ನ ಟ್ರಸ್ಟಿ ಕೆ. ರಘುರಾಮರಾವ್, ಮ್ಯಾನೇಜಿಂಗ್ ಡೈರೆಕ್ಟರ್ ರಶ್ಮಿಕೃಷ್ಣ ಪ್ರಸಾದ್, ಶಶಿಧರ್ ರಾವ್ ಉಪಸ್ಥಿತರಿದ್ದರು. ಆಸ್ಪತ್ರೆಯ ಬೆಳವಣಿಗೆಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.

ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಸ್ವಾಗತಿಸಿದರು.ಡಾ. ವಿಜಯೇಂದ್ರ ನಿರೂಪಿಸಿದರು. ಸಿಇಒ ಗೌರಿ ವಂದಿಸಿದರು.