ಉಡುಪಿ: ಕಾಲೇಜ್ ವಿದ್ಯಾರ್ಥಿನಿ ನಾಪತ್ತೆ.

ಉಡುಪಿ: ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡ ಎಂಬಲ್ಲಿ ಮನೆಯಲ್ಲಿ ರಾತ್ರಿ ಊಟ ಮಾಡುತ್ತಿದ್ದ ಯುವತಿ ದಿಢೀರ್‌ ನಾಪತ್ತೆಯಾದ ಘಟನೆ ಅ.24ರಂದು ರಾತ್ರಿ ನಡೆದಿದೆ.

ಉಡುಪಿ ಕಾಲೇಜೊಂದರ ಬಿಕಾಂ ಪದವಿ ವ್ಯಾಸಂಗ ನಡೆಸುತ್ತಿರುವ ಅಚ್ಚಡ ನಿವಾಸಿ ಶಶಿಕಲಾ (19) ನಾಪತ್ತೆಯಾಗಿರುವ ಯುವತಿ. ಗುರುವಾರ ರಾತ್ರಿ ತಾಯಿಯೊಂದಿಗೆ ಊಟ ಮಾಡುತ್ತಿದ್ದ ಆಕೆ ಊಟ ಮಾಡುತ್ತಿದ್ದಾಗಲೇ ಹೊರಗೆ ಬಂದಿದ್ದು, ಅಲ್ಲಿಂದಲೇ ದಿಢೀರ್‌ ನಾಪತ್ತೆಯಾಗಿದ್ದಾಳೆ.

ತಾಯಿ ಮನೆ ಪಕ್ಕದಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದು, ಬಳಿಕ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.