ಮಣಿಪಾಲ: ಆ್ಯಪ್ ಆಧಾರಿತ ಶಾಪಿಂಗ್ ದೈತ್ಯ ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಬುಕ್ ಮಾಡಿದ ಮಣಿಪಾಲದ ವ್ಯಕ್ತಿಯೊಬ್ಬರಿಗೆ ಕೈಗೆ ಬಂದಾಗ ಬುಕ್ ಮಾಡಿದ ಮೊಬೈಲ್ ಬದಲಿಗೆ ಮೊಬೈಲ್ ಆಟಿಕೆ (ಡಮ್ಮಿ) ಸಿಕ್ಕಿದ ವಿದ್ಯಮಾನ ನಡೆದಿದೆ.
ಮಣಿಪಾಲದ ಹುಡ್ಕೋ ನಿವಾಸಿಯಾಗಿರುವ ಅನಿಲ್ ಕುಮಾರ್ ಎನ್ನುವವರು ಅ. 8 ರಂದು ರೂ.9,990 ಮುಖ ಬೆಲೆಯ vivo y91 (nebula purple, 32 GB) ಮೊಬೈಲ್ ಅನ್ನು ಫ್ಲಿಪ್ಕಾರ್ಟ್ ನಲ್ಲಿ ಬುಕ್ ಮಾಡಿದ್ದರು. ಆದರೆ ಅದರ ಬದಲಿಗೆ Samsung Galaxy j8 infinity ಆಟಿಕೆಯಂತಹ ಮೊಬೈಲ್ (ಡಮ್ಮಿ) ಕಳುಹಿಸಿ ಗ್ರಾಹಕನ ಯಾಮಾರಿಸಿದ್ದಾರೆ ಕಂಪೆನಿಯವರು.
ವಿಡಿಯೋ; ವರದಿ:ರಾಮ್ ಅಜೆಕಾರ್
https://www.youtube.com/watch?v=hDj0HpsYaa8&feature=youtu.be
ಅನಿಲ್ ಕುಮಾರ್ ಹಾಗೂ ಸದಾನಂದ ಕುಲಾಲ ಅವರು ಸರಿಯಾದ ಸಮಯ ಪ್ರಜ್ಞೆಯಿಂದ ಎಚ್ಚೆತ್ತು ಡೆಲಿವರಿ ಬಾಯ್ ಗೆ ಈ ಕುರಿತು ವಿಚಾರಣೆ ನಡೆಸಿದ ಬಳಿಕ ಕಂಪೆನಿಯವರು ಮೊಬೈಲ್ ಆಟಿಕೆಯನ್ನು ಹಿಂತಿರುಗಿಸಿದ್ದಾರೆ. ಕುರಿತು ಪೊಲೀಸ್ ಸ್ಟೇಶನ್ ಗೂ ದೂರ ನೀಡಲಾಗಿದ್ದು ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡು ಕಂಪೆನಿ ಹಣವನ್ನು ಹಿಂತಿರುಗಿಸಿದೆ.ಆದರೂ ಆನ್ ಲೈನ್ ವ್ಯವಹಾರದ ಕುರಿತು ಈ ಘಟನೆ ಜನರಲ್ಲಿ ಸಂಶಯ ಬೀರುವಂತೆ ಮಾಡಿದೆ.