ಉಡುಪಿ: ಮಂಗಳಮುಖಿಯರ ಉಪಟಳ ಕುರಿತು ಸಾರ್ವಜನಿಕರ ದೂರು ನೀಡಿದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ರಾತ್ರೋರಾತ್ರಿ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು.
ಮಹಿಳಾ ಸಿಬ್ಬಂದಿ ಸಹಿತ ಉಡುಪಿ ನಗರ ಠಾಣೆಯ 30ಕ್ಕೂ ಅಧಿಕ ಪೊಲೀಸರು ನೈಟ್ ರೌಂಡ್ಸ್ ನಡೆಸಿದರು. ನಗರದ ಬಸ್ ನಿಲ್ದಾಣ ಸುತ್ತಮುತ್ತ, ಕೆಎಸ್ ಆರ್ ಟಿಸಿ, ಸಿಟಿ ಬಸ್, ಸರ್ವೀಸ್ ಬಸ್ ನಿಲ್ದಾಣ ಬಳಿ ಕಾರ್ಯಾಚರಣೆ ನಡೆಸಿದರು.
ಪೊಲೀಸರ ಲಾಠಿ, ಬೂಟು ಸದ್ದು ಕೇಳುತ್ತಲೇ ಬಸ್ ನಿಲ್ದಾಣದಲ್ಲಿ ಮಲಗಿದ್ದವರು ದಿಕ್ಕಾಪಾಲಾಗಿ ಓಡಿದರು. ಲಾಠಿ ಹಿಡಿದು ಗಸ್ತು ಆರಂಭಿಸಿದ ಪೊಲೀಸರನ್ನು ಕಂಡು ಸಾರ್ವಜನಿಕರು ಶಾಕ್ ಗೆ ಒಳಗಾದರು.