ಕಾಪು: ಮನೆಯ ಹಂಚಿನ ನಡುವೆ ಅಡಗಿ ಕುಳಿತ ಹೆಬ್ಬಾವು

ಉಡುಪಿ: ಮನೆಯ ಹಂಚಿನ ನಡುವೆ ಅಡಗಿ ಕುಳಿತ ಹೆಬ್ಬಾವನ್ನು ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಲಾಗಿದೆ.

ಕಾಪು ತಾಲೂಕಿನ ಕರಂದಾಡಿಯ ಭಾಸ್ಕರ ಪೂಜಾರಿ ಎಂಬವರ ಮನೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಅದನ್ನ ಇಳಿಸಲು ಸಾಧ್ಯವಾಗಿಲ್ಲ. ಬಳಿಕ ಹಾವನ್ನು ರಕ್ಷಿಸುವ ಶಿವಾನಂದ ಪೂಜಾರಿ ಹಾಗೂ ಪ್ರಶಾಂತ ಪೂಜಾರಿ ಅವರನ್ನು ಕರೆಸಲಾಯಿತು. ಅವರು ಹಂಚಿನಡಿಯಲ್ಲಿ ಅವಿತು ಕುಳಿತಿದ್ದ ಭಾರೀ ಗಾತ್ರದ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

Oplus_131072
Oplus_131072