ಉಡುಪಿ ಆದಿಶಕ್ತಿ ಹೂವಿನ ಅಂಗಡಿಯ ಮಾಲೀಕ ಸುಧಾಕರ ಶೇರಿಗಾರ್ ನಿಧನ

ಉಡುಪಿ: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಆದಿಶಕ್ತಿ ಹೂವಿನ ಅಂಗಡಿಯ ಮಾಲೀಕ, ಬೀಡಿನಗುಡ್ಡೆ ನಿವಾಸಿ ಸುಧಾಕರ ಶೇರಿಗಾರ್(75) ಅವರು ಸೋಮವಾರ ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ನಗರದ ಬಸ್ ನಿಲ್ದಾಣದ ಬಳಿಯ ಆದಿಶಕ್ತಿ ಪ್ಲವರ್ ಸ್ಟಾಲ್ ಮೂರು ದಶಕಗಳಿಂದ ಹೆಚ್ಚುಕಾಲ ಮುನ್ನಡೆಸಿದ್ದರು. ಮೃತರು ಪತ್ನಿ, ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.