ಕೊಲ್ಲೂರು: ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರ ಚಿನ್ನಾಭರಣ ಇದ್ದ ಪರ್ಸ್ ಕಳವಾಗಿರುವ ಘಟನೆ ಅ.18ರಂದು ಸಂಜೆ ವೇಳೆ ನಡೆದಿದೆ.
ಕೇರಳದ ಸಾಯಿಪ್ರಸನ್ನ ಎಂಬವರು ಚಿನ್ನದ ಆಭರಣವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಬಂದಿದ್ದು, ಬಳಿಕ ಪರಿಶೀಲಿಸಿದಾಗ ಅವರ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಇದ್ದ ಪರ್ಸ್ ಕಳವು ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












