ಹೆಮ್ಮಾಡಿ: ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜೇಸಿಐ ಕುಂದಾಪುರ ಸಿಟಿ ಮತ್ತು ಕಿಯೋನಿಕ್ಸ್ ಚರ್ಚ್ ರಸ್ತೆ ಕುಂದಾಪುರ ಇವರ
ಸಹಕಾರದೊಂದಿಗೆ ಚೌಡೇಶ್ವರಿ ಟೈಗರ್ಸ್ ಟಿ.ಟಿ. ರಸ್ತೆ ಕುಂದಾಪುರ ಇವರಿಂದ ಹುಲಿವೇಷ ಕುಣಿತ ಪ್ರದರ್ಶನ ನಡೆಯಿತು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರ, ಜೇಸಿಐ ಸಿಟಿ ಕುಂದಾಪುರದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಕಾರ್ತಿಕೇಯ ಮಧ್ಯಸ್ಥ, ಸ್ಥಾಪಕಾಧ್ಯಕ್ಷರಾದ ಶ್ರೀ ಹುಸೇನ್ ಹೈಕಾಡಿ, ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಹರ್ಷವರ್ಧನ್ ಶೆಟ್ಟಿ, ಮಾಲಕರು ಕಿಯೋನಿಕ್ಸ್ ಚರ್ಚ್ ರಸ್ತೆ ಕುಂದಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚೌಡೇಶ್ವರಿ ಹುಲಿ ಕುಣಿತ ತಂಡದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.