ಉಡುಪಿ: ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಮಾನೋತ್ಸವ ಆಚರಣೆಯ “ಶತಾಭಿವಂದನಂ- 2023” ಕಾರ್ಯಕ್ರಮದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕೆಮ್ಮಣ್ಣುವಿನ ದಿ. ರಾಜಗೋಪಾಲ್ ಭಟ್ ವೇದಿಕೆಯಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಾಮಾಜಿಕ ಚಿಂತಕ ವಾಗ್ಮಿ ದಾಮೋದರ್ ಶರ್ಮಾ ಅವರು, ಆರ್ಥಿಕ ವ್ಯವಹಾರದ ಜೊತೆಗೆ ಮಾನವೀಯತೆ, ಪ್ರೀತಿ, ನಂಬಿಕೆ, ವಿಶ್ವಾಸ, ಗೌರವ ಇದೆಲ್ಲವೂ ಮೇಳೈಸಿದರೆ ಮಾತ್ರ ಆ ವ್ಯವಹಾರಕ್ಕೆ ಬೆಲೆ ಇರುತ್ತದೆ. ಇಲ್ಲದಿದ್ದರೆ ವ್ಯವಹಾರಕ್ಕೆ ಬೆಲೆ ಬರುವುದಿಲ್ಲ. ಈ ಸಂಸ್ಥೆ ಆರ್ಥಿಕ ವ್ಯವಹಾರದಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಿದೆ. ಸಂಸ್ಥೆ ಆರ್ಥಿಕವಾಗಿ ಬಾಲಢ್ಯವಾದಾಗ ಹೇಗೆ ಸಮಾಜಮುಖಿಯಾಗಿ ಕಾಣಿಸಿಕೊಳ್ಳಬೇಕೆಂಬುವುದಕ್ಕೆ ಇದು ಉತ್ತಮ ನಿದರ್ಶನ ಎಂದು ಶುಭ ಹಾರೈಸಿದರು.
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ ಶೆಟ್ಟಿ, ಆನಂದ್ ರಾವ್, ಲಕ್ಷ್ಮೀ ಭಟ್, ನಿವೃತ್ತ ಪ್ರಧಾನ ವ್ಯವಸ್ಥಾಪಕ ದೇಜಪ್ಪ ಅಮೀನ್, ಸಲಹಾ ಸಮಿತಿ ಸದಸ್ಯರಾದ ಮಾಧವ, ಸುಧಾಕರ್ ಆಚಾರ್ಯ, ಮನೋಹರ ಶೆಟ್ಟಿ ತೋನ್ಸೆ, ಎಂ.ಎಸ್ ಭಟ್, ನಂದಕಿಶೋರ್, ಗೋಪಾಲಕೃಷ್ಣ , ಸಿಇಓ ಮಹೇಶ ಸಾಲ್ಯಾನ್, ಸತೀಶ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಅಫ್ಜಲ್ ಸಾಹೇಬ್, ನಿರ್ದೇಶಕರಾದ ಗೋಪಾಲಕೃಷ್ಣ ಹೆಗ್ಡೆ, ಲತಾ, ನಾರಾಯಣ ಬಂಗೇರ, ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು.