ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ನೊಯೆಲ್ ಟಾಟಾ ಆಯ್ಕೆ

ಮುಂಬೈ: ಸಮಸ್ತ ಟಾಟಾ ಸಮೂಹವನ್ನು ನಿರ್ವಹಿಸುವ ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ನೊಯೆಲ್ ಟಾಟಾ (67) ಅವರನ್ನು ಆಯ್ಕೆ ಮಾಡಲಾಗಿದೆ.

ಇದುವರೆಗೂ ಈ ಸ್ಥಾನದಲ್ಲಿದ್ದ ರತನ್ ಟಾಟಾ ಅವರ ನಿಧನದ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಟಾಟಾ ಟ್ರಸ್ಟ್‌ನ ಆಡಳಿತ ಮಂಡಳಿ, ರತನ್ ಅವರ ಮಲಸೋದರ ನೊಯೆಲ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನೊಯೆಲ್ ಟಾಟಾ, ‘ರತನ್ ಟಾಟಾ ಮತ್ತು ಟಾಟಾ ಗ್ರೂಪ್‌ನ ಸಂಸ್ಥಾಪಕರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ನಾನು ಬಯಸುತ್ತೇನೆ. ಶತಮಾನಗಳ ಹಿಂದೆ ಸ್ಥಾಪಿಸಿದ ಟಾಟಾ ಟ್ರಸ್ಟ್ ಸಮಾಜ ಕಲ್ಯಾಣದ ಒಂದು ಸಾಧನ. ಈ ಗಂಭೀರ ಸನ್ನಿವೇಶದಲ್ಲಿ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಮತ್ತು ದಾನದ ಕಾರ್ಯಕ್ರಮಗಳನ್ನು ಮುಂದುವರೆಸಿ ಕೊಂಡು ಹೋಗುವ ವಚನವನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಹೇಳಿದ್ದಾರೆ. ನೊಯೆಲ್ ಟಾಟಾ 1999ರಿಂದಲೂ ಟಾಟಾ ಗ್ರೂಪ್‌ನಲ್ಲಿ ಸಕ್ರಿಯರಾಗಿದ್ದು, ರತನ್ ಟಾಟಾ ಜೊತೆಗೆ ತೆರೆಮರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ರತನ್ ಟಾಟಾರ ತಂದೆಯ ಮೊದಲ ಪತ್ನಿಯ ಮಗ ರತನ್ ಟಾಟಾ ಆಗಿದ್ದರೆ, ಎರಡನೇ ಪತ್ನಿಯ ಪುತ್ರ ನೊಯೆಲ್ ಟಾಟಾ ಆಗಿದ್ದರು.