ಕೊಕ್ಕರ್ಣೆಯ ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆಗೆ ಸಂಸದ ಕೋಟ, ಶಾಸಕ ಯಶ್ ಪಾಲ್ ಭೇಟಿ

ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಮುಖ್ಯರಸ್ತೆಯ ಓಂಶ್ರೀ ಸಂಕೀರ್ಣದಲ್ಲಿ ಆರಂಭಗೊಂಡ ‘ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆ “ಶ್ರೀರಾಮ್ ಟೆಕ್ಸ್‌ ಟೈಲ್ಸ್” ಮಳಿಗೆಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಕೋಟ ಶ್ರೀನಿವಾಸ ಪೂಜಾರಿ‌ ಹಾಗೂ ಯಶ್ ಪಾಲ್ ಸುವರ್ಣರನ್ನು ಗೌರವಿಸಲಾಯಿತು.
ಸಂಸ್ಥೆಯ ಪಾಲುದಾರರಾದ ಬಿ. ಸತ್ಯನಾಥ ಪುರುಷೋತ್ತಮ ಪೈ, ಬಿ. ಗಿರಿಧರ ಸತ್ಯನಾಥ ಪೈ, ಸ್ಮಿತಾ ಆರ್. ನಾಯಕ್, ಓಂಶ್ರೀ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.