ಮಂಗಳೂರು: ಮನೆಯವರು ಮೊಬೈಲ್ ಕಿತ್ತುಕೊಂಡ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿ ನಾಪತ್ತೆ.

ಮಂಗಳೂರು: ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮನೆಯವರು ಮೊಬೈಲ್ ಕಿತ್ತುಕೊಂಡದ್ದಕ್ಕೆ ಪಿಯುಸಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ನಾಪತ್ತೆಯಾದವ ವಿದ್ಯಾರ್ಥಿ ವಾಮಂಜೂರು ಸೈಂಟ್ ರೈಮಂಡ್ಸ್ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಮೇಗಿನಪೇಟೆ ನಿವಾಸಿ ಮುಹಮ್ಮದ್ ಯಾಸೀನ್ ಅಫ್ನಾನ್ (16).ಈತನಿಗೆ ನಿರಂತರವಾಗಿ ಮೊಬೈಲ್ ನೋಡುವ ಚಟವಿತ್ತು ಎನ್ನಲಾಗಿದೆ.

ಸೆ.25ರಂದು ಮನೆಯಲ್ಲಿರುವಾಗ ಅವನ ಬಳಿ ಯಿದ್ದ ಮೊಬೈಲ್‌ನ್ನು ಮನೆಯವರು ಕಿತ್ತುಕೊಂಡಿದ್ದರು. ಬಳಿಕ ಕಾಲೇಜಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರ ಹೋಗಿದ್ದ ಮುಹಮ್ಮದ್ ಯಾಸೀನ್ ಕಾಲೇಜಿಗೆ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಮಾರು 5.2 ಅಡಿ ಎತ್ತರದ, ಎಣ್ಣೆಕಪ್ಪು ಮೈಬಣ್ಣದ, ಕಪ್ಪು ಕೂದಲಿನ, ಸಾಧಾರಣ ಶರೀರದ, ಕೋಲುಮುಖದ ಈತ ನೀಲಿ ಮತ್ತು ಹಸಿರು ಬಣ್ಣದ ಸ್ಪೋರ್ಟ್ಸ್ ಟಿ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಹಾಗೂ ಎಡಕೈಗೆ ಸಿಲ್ವರ್ ಕಲರ್ ವಾಚ್ ಧರಿಸಿದ್ದಾನೆ. ತುಳು, ಕನ್ನಡ, ಬ್ಯಾರಿ ಭಾಷೆಗಳನ್ನು ಮಾತನಾಡುತ್ತಾನೆ.

ಈತನ ಬಗ್ಗೆ ಮಾಹಿತಿ ಇದ್ದರೆ ಪಾಂಡೇಶ್ವರ ಪೊಲೀಸ್ ಠಾಣೆ (0824-2220518)ಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.