ಮಂಗಳೂರು:ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಒಂದು ಕಲೆಯಾಗಿದೆ. ಶಿಕ್ಷಣದ ಗುರಿ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಹಾಗೂ ನೈತಿಕ ಮೌಲ್ಯಗಳ ಅರಿವು ಮೂಡಿಸುವುದಾಗಿದೆ. ಈ ನಿಟ್ಟಿನಲ್ಲಿ ಕಳೆದ 26 ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿರುವ ತ್ರಿಶಾ ಸಮೂಹ ಸಂಸ್ಥೆಯ ಮಂಗಳೂರಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಅಕ್ಟೋಬರ್ 4 ರಂದು ನಡೆಯಿತು.
ಶ್ರೀ ಶ್ರೀ ಶ್ರೀ ವಿಠ್ಠಲದಾಸ ಸ್ವಾಮೀಜಿ, ಸಾಂದೀಪನಿ ಸಧಾನಾಶ್ರಾಮ ಶ್ರೀ ಕ್ಷೇತ್ರ ಕೇಮಾರು, ರವರು ಉದ್ಘಾಟನೆಯನ್ನು ನೆರವೇರಿಸಿ ಭಗವದ್ಗೀತೆಯ ಪ್ರಕಾರ ಆಧ್ಯಾತ್ಮಿಕ ಶಿಕ್ಷಣಕ್ಕಿಂತ ಮಿಗಿಲಾದ ಶಿಕ್ಷಣ ಬೇರೊಂದಿಲ್ಲ. ಬರೀ ಅಂಕಗಳನ್ನು ಗಳಿಸುವುದು ಶಿಕ್ಷಣದ ಗುರಿಯಾಗಬಾರದು ಬದಲಿಗೆ ಗುರು ಕುಲ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಇಂದಿನ ಶಿಕ್ಷಣ ಸಂಸ್ಥೆಗಳು ನೀಡಬೇಕಾಗಿದೆ. ಮಾನವೀಯತೆ, ಆತ್ಮವಿಶ್ವಾಸ , ಸಂಸ್ಕಾರಗಳನ್ನೊಳಗೊಂಡ ಶಿಕ್ಷಣ ಅವಶ್ಯಕ ಎಂದು ತ್ರಿಶಾದ ಈ ಯಶಸ್ಸಿನ ಪಯಣಕ್ಕೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಸಿದ್ದ ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸ್ಪೀಕರ್ ಶ್ರೀ ಯು ಟಿ ಖಾದರ್ ರವರು ದೇಶದ ಬಲಿಷ್ಠವಾಗಬೇಕಾದರೆ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಬರೀ ಪುಸ್ತಕದ ವಿದ್ಯೆ ಜೀವನಕ್ಕೆ ಬೇಕಾದ ಪಾಠಗಳನ್ನು ಕಲಿಸುವುದಿಲ್ಲ ಜೊತೆಗೆ ಬುದ್ದಿವಂತಿಕೆ, ಮಾನವೀಯತೆ, ಸಾಮಾಜಿಕ ಅಂಶಗಳನ್ನು ಒಳಗೊಂಡ ಶಿಕ್ಷಣವನ್ನು ಪಡೆಯುವುದು ಅಗತ್ಯವಾಗಿದೆ .ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಅಂತಹ ಶಿಕ್ಷಣವನ್ನು ತ್ರಿಶಾ ಸಂಸ್ಥೆ ನೀಡುತ್ತಿದೆ ಎಂದು ತ್ರಿಶಾ ಸಂಸ್ಥೆಗೆ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಯ ಸಂಸ್ಥಾಪಕರು ಸಿ ಎ ಗೋಪಾಲಕೃಷ್ಣ ಭಟ್ ರವರು ವಿದ್ಯಾರ್ಥಿಗಳ ತೃಷೆಯನ್ನು ನೀಗಿಸಲು ಆರಂಭವಾದ ತ್ರಿಶಾ ಸಂಸ್ಥೆಯ ನೂತನ ಕಟ್ಟಡವು ಯಶಸ್ವಿಯಾಗಿ ಉದ್ಘಾಟನೆಗೊಂಡಿತು.ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನವರಾತ್ರಿಯಲ್ಲಿ ಆರಂಭವಾದ ಈ ಹೊಸ ಪಯಣ ಮುಂದಿನ ಭವಿಷ್ಯದಲ್ಲಿ ಇನ್ನಷ್ಟೂ ಪ್ರಗತಿಯನ್ನು ಕಾಣಲಿ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಉತ್ತರ ವಲಯದ ಶಾಸಕ ಡಾ.ಭರತ್ ಶೆಟ್ಟಿ ವೈ ,ಮೈಸೂರು ಎಂಜಿಬಿ ವರ್ಕ್ಸ್ ನ ಪ್ರಮೋಟರ್ ಶ್ರೀ ಗೋವಿಂದ ಜಗನಾಥ ಶೆಣೈ ದೀಕ್ಷಾ ಸಂಸ್ಥೆಯ ಸ್ಥಾಪಕ ಡಾ. ಶ್ರೀಧರ್ ಜಿ, ಐಸಿಎಐ ನ ಎಸ್ ಐ ಆರ್ ಸಿ (SIRC) ಮಂಗಳೂರು ಶಾಖೆಯ ಅಧ್ಯಕ್ಷ ಸಿ ಎ ಗೌತಮ್ ಪೈ ಡಿ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ , ಮಂಗಳೂರು ದಕ್ಷಿಣ ವಿಧಾನಸಭಾ ಸದಸ್ಯ ಶ್ರೀ ಡಿ ವೇದವ್ಯಾಸ ಕಾಮತ್, ಐಸಿಐಸಿಐ ಬ್ಯಾಂಕ್ ನ ವಲಯ ಮುಖ್ಯಸ್ಥ ಶ್ರೀ ಶಶಿಕುಮಾರ್ ಎನ್, ಬಂಗ್ರಾ ಕೂಳೂರು ವಾರ್ಡ್ ನ ಕಾರ್ಪೋರೇಟರ್ ಶ್ರೀ ಕಿರಣ್ ಕುಮಾರ್ ಕೋಡಿಕಲ್, ತ್ರಿಶಾ ಸಮೂಹ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ್ ಕಾಯರ್ಕಟ್ಟೆ ಹಾಗೂ ಹಲವು ಗಣ್ಯರು ಆಗಮಸಿದ್ದರು.
ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಪ್ರಭಾ ಸ್ವಾಗತಿಸಿ ,ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶನಲ್ ಡಿಸೋಜ ನಿರೂಪಿಸಿದರು. ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರು ಪ್ರೊಫೆಸರ್ ಮಂಜುನಾಥ್ ಕಾಮತ್, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಹಾಗೂ ರಾಮ್ ಪ್ರಭು, ತ್ರಿಶಾ ಕ್ಲಾಸಸ್ ಮಂಗಳೂರಿನ ಮುಖ್ಯಸ್ಥೆ ಯಶಸ್ವಿನಿ ಯಶ್ ಪಾಲ್ ,ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.