ಮಂಗಳೂರು: ಅ.02 ರಂದು ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ ಉದ್ಘಾಟನೆ

ಮಂಗಳೂರು: ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯು ಕಳೆದ 15 ವರುಷಗಳಿಂದ, ಮಂಜೆಶ್ವರದ ಪಾವೂರು ಬಳಿಯ ಬಾಚಾಳಿಕೆ ಎಂಬಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಆಶ್ರಮ ಒಂದನ್ನು ಸ್ಥಾಪಿಸಿ, ಅವರಿಗೆ ಅಸರೆ ಒದಗಿಸಿದ್ದು, ರೋಗಿಗಳ ಶೂಶ್ರುಷೆ ಮಾಡಿ, ಔಷೋದೊಪಚಾರ ನೀಡಿ, ಅವರನ್ನು ಗುಣಪಡಿಸಿ 1300ಕ್ಕೂ ಮಿಗಿಲಾಗಿ ಅಂತಹ ಗುಣಪಟ್ಟ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ, ನಿಸ್ವಾರ್ಥವಾಗಿ ನಡೆಸುತ್ತಿರುವ ಸೇವೆಯು ನಿರಾಶ್ರಿತ, ನಿರಾಧಾರಿತರಿಗೆ ಸ್ನೇಹಾಲಯವು ಭರವಸೆಯ ಆಶಾದೀಪವಾಗಿದೆ.

ಸರಕಾರದ ಮಾನ್ಯತೆ ಪಡೆದು, ಸಾರ್ವಜನಿಕರ ಪ್ರಶಂಸೆ, ಬೆಂಬಲದೊಂದಿಗೆ ಸಂಸ್ಥೆಯು ಮಾಡುತ್ತಿರುವ ಸೇವೆಯು ಈಗ ಮನೆಮಾತಾಗಿದೆ. ಸೇವಾ ಕ್ಷೇತ್ರದಲ್ಲಿ ಒಂದೊಂದೇ ಮೆಟ್ಟಲನ್ನು ಹತ್ತುವ ಅಭ್ಯಾಸ ಮಾಡಿಕೊಂಡ ಸಂಸ್ಥೆಯ ಕಣ್ಣಿಗೆ ಬಿದ್ದ ಇನ್ನೊಂದು ಮಹಾ ಅವಕಾಶ, ಸಮಾಜದಲ್ಲಿ ಹೆಮ್ಮರವಾಗಿ ಬೇರು ಬಿಡುತ್ತಿರುವ ಸಾಮಾಜಿಕ ಕಂಟಕ “ವ್ಯಸನಗಳು.”
ಯುವಜನರಲ್ಲಿ, ಪ್ರೌಡಾವಸ್ಥೆಯಲ್ಲಿರುವ ಬಾಲಕ/ಬಾಲಕಿಯಲ್ಲಿ, ಸ್ತ್ರೀಯರಲ್ಲೂ ಹರಡಿ ಸಮಾಜವನ್ನೇ ನಾಶಮಾಡುತ್ತಿರುವ ಸಾಮಾಜಿಕ ಪಿಡುಗು ಬಗ್ಗೆ ಸಂಸ್ಥೆಯು ಹೊಸ “ವ್ಯಸನ ಮುಕ್ತ ಸಮಾಜ” ರೂಪಿಸುವಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ.

ಈ ಸೇವೆಯು ಎಲ್ಲಾ ತರಹದ ವ್ಯಸನಿಗಳಿಗೆ ಆರೈಕೆ, ಸೇವೆ ಹಾಗು ಪುನರ್ವಸತಿಯ ನೂತನ ಕೇಂದ್ರವಾಗಲಿದೆ. ಈ ನೂತನ “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ”ವನ್ನು ಅ.02 ರಂದು ಮುಂಜಾನೆ 9.30 ಘಂಟೆಗೆ ಸರಿಯಾಗಿ ಸ್ನೇಹಾಲಯ ಸಂಸ್ಥೆ ಬಾಚಾಳಿಕೆಯ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.

ನೂತನ ಕೇಂದ್ರದ ಉದ್ಘಾಟನೆಯನ್ನು ಸನ್ಮಾನ್ಯ ಶ್ರಿಯುತ ಮೈಕಲ್ ಡಿ ಸೋಜ, (ಭಾರತೀಯ ಅನಿವಾಸಿ ಉದ್ಯಮಿ, ದುಬಾಯಿ) ಇವರು ನೆರವೇರಿಸುವರು.
ಕೇಂದ್ರದ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಸನ್ಮಾನ್ಯ ಅತೀ ವಂ. ಡೊ. ಪೀಟರ್ ಪಾವ್ಲ್ ಸಲ್ದಾನ್ಹಾ ಇವರು ನೆರವೇರಿಸುವರು.

ಸಂಭ್ರಮದ ಮುಖ್ಯ ಅತಿಥಿಗಳಾಗಿ ದೆಹಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷರಾದ ಸನ್ಮಾನ್ಯ ಅತೀ ವಂದನೀಯ ದೀಪಕ್ ವಲೇರಿಯನ್ ತಾವ್ರೊರವರು ಭಾಗವಹಿಸಲಿದ್ದಾರೆ.

ಪ್ರಮುಖ ಭಾಷಣಕಾರಾರಾಗಿ, ವಿಶೇಷ ಅಹ್ವಾನಿತರಾದ ಸನ್ಮಾನ್ಯ ವಿಜಯಲಕ್ಶ್ಮೀ ಶಿಬರೂರು (ದಿಟ್ಟ ಖ್ಯಾತ ಪತ್ರಕರ್ತೆ) ಹಾಗೂ ಸನ್ಮಾನ್ಯ ಆತ್ಮದಾಸ್ ಯಾಮಿ (ಬಹು ಧಾರ್ಮಿಕ ಜ್ಞಾನಿ) ತಮ್ಮ ಸಂದೇಶ ನೀಡಲಿದ್ದಾರೆ.

ಗಣ್ಯ ಅತಿಥಿಗಳಾಗಿ ಯು.ಟಿ.ಖಾದರ್, ಸ್ಪೀಕರ್, ಕರ್ನಾಟಕ ಸರಕಾರ, ಎ.ಕೆ.ಎಮ್. ಅಶ್ರಫ಼್ಹ್, ಮಾನ್ಯ ಶಾಸಕರು, ಮಂಜೆಶ್ವರ, ಕುನ್ಹಂಭು, ಶಾಸಕರು, ಉದುಮ, ವಾಲ್ಟರ್ ನಂದಳಿಕೆ ದಾಯ್ಜಿವಲ್ಡ್ ಸಂಸ್ಥಾಪಕರು ಮಾತಾನಾಡಲಿದ್ದಾರೆ.
ಈ ಸಂಭ್ರಮದ ಉದ್ಘಾಟನೆಗೆ 50ಕ್ಕೂ ಅಧಿಕ ಅತಿಥಿಗಳು, 100 ಕ್ಕಿಂತಲೂ ಅಧಿಕ ದಾನಿಗಳು, ಸಾವಿರಾರು ಪ್ರೇಕ್ಷಕರ, ಅಭಿಮಾನಿಗಳ, ಹಿತೈಷಿಗಳ ಉಪಸ್ಥಿತಿಯನ್ನು ನೀರಿಕ್ಷಿಸಲಾಗಿದೆ.