ಉಡುಪಿ: ಧಾರ್ಮಿಕ ಸ್ಥಳಗಳ ವೀಕ್ಷಣೆಗೆಂದು ಜಿಲ್ಲೆಗೆ ಬಂದಿದ್ದ ಕೇರಳ ಮೂಲದ ಜಯ ವಿಜಯನ್(62) ಎಂಬ ವ್ಯಕ್ತಿಯು ಸೆಪ್ಟಂಬರ್ 22 ರಂದು ಕೃಷ್ಣ ಮಠಕ್ಕೆ ತೆರಳಿದ ಸಂದರ್ಭದಲ್ಲಿ ನಾಪತ್ತೆಯಾಗಿರುತ್ತಾರೆ.
167 ಸೆ.ಮೀ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಮಲಯಾಳಂ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.