ಕೆಎಸ್ಸಾರ್ಟಿಸಿ ವತಿಯಿಂದ ದಸರಾ ಪ್ರಯುಕ್ತ ಮಂಗಳೂರು ನವದುರ್ಗ ದರ್ಶನ ವಿಶೇಷ ಪ್ಯಾಕೇಜ್.

ಮಂಗಳೂರು: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ವತಿಯಿಂದ ದಸರಾ ಪ್ರಯುಕ್ತ‌ ಮಂಗಳೂರು ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು ಮಡಿಕೇರಿ, ಮಂಗಳೂರು- ಕೊಲ್ಲೂರು, ಮಂಗಳೂರು- ಮುರುಡೇಶ್ವರಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅ.3ರಿಂದ 12ರವರೆಗೆ ಯೋಜಿಸಲಾಗಿದೆ.

ನವದುರ್ಗ ದರ್ಶನ:
ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು, ಶ್ರೀ ಮಂಗಳಾದೇವಿ ದೇವಸ್ಥಾನ – ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ- ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ- ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) – ಸಸಿಹಿಷ್ಣು ಶ್ರೀ ಭಗವತಿ ದೇವಸ್ಥಾನ ಹಾಗೂ ಬೀಟ್- ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ- ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ)- ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ನವದುರ್ಗಾ ದರ್ಶನ ರಾತ್ರಿ 8 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ.

ಒಟ್ಟು ಪ್ರಯಾಣದರ (ಊಟ ಉಪಹಾರ ಹೊರತುಪಡಿಸಿ) ವಯಸ್ಕರಿಗೆ 400 ರೂ. ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 300 ರೂ ಪ್ರಯಾಣ ದರ ನಿಗದಿಪಡಿಸಲಾಗಿದೆ.

ಮಡಿಕೇರಿ ಪ್ಯಾಕೇಜ್ ಪ್ರವಾಸ:
ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಡಿಕೇರಿ-ರಾಜಾಸೀಟ್‌ -ಅಬ್ಬಿಫಾಲ್ಸ್-ನಿಸರ್ಗಧಾಮ-ಗೋಲ್ಡನ್‌ ಗೋಲ್ಡನ್ ಟೆಂಪಲ್ ಪ್ರವಾಸ ಕೈಗೊಂಡು ರಾತ್ರಿ 9 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ), ವಯಸ್ಕರಿಗೆ 500 ರೂ. ಮಕ್ಕಳಿಗೆ 16 ವರ್ಷದಿಂದ 12 ವರ್ಷದವರಿಗೆ) 400 ರೂ. ನಿಗದಿಪಡಿಸಲಾಗಿದೆ.

ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸ:
ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ- ಕಮಲಶಿಲೆ ಶ್ರೀ ಬ್ರಾಹ್ಮ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) – ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ- ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ 500 ರು.. ಮಕ್ಕಳಿಗೆ (6- 12 ವರ್ಷದವರಿಗೆ) 400 ರು. ದರ ನಿಗದಿಪಡಿಸಲಾಗಿದೆ.

ಮಂಗಳೂರು-ಮುರುಡೇಶ್ವರ ಟೂರ್‌ ಪ್ಯಾಕೇಜ್:
ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮುರುಡೇಶ್ವರ ದೇವಸ್ಥಾನ, ಚಂಡಿಕಾ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕುಂಭಾಶಿ- ಆನೆಗುಡ್ಡೆ ಗಣಪತಿ ದೇವಸ್ಥಾನ- ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ (ಊಟ, ಉಪಹಾರ ಹೊರತುಪಡಿಸಿ). ವಯಸ್ಕರಿಗೆ 550 ರೂ. ಮಕ್ಕಳಿಗೆ (6- 12 ವರ್ಷದವರಿಗೆ) 450 ರೂ. ದರ ನಿಗದಿಪಡಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕಾಯ್ದಿರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಮಾಹಿತಿಗಾಗಿ: 7760990702, 7760990711, ಮಂಗಳೂರು-1ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ 7760990713,

ಮಂಗಳೂರು-3ನೇ ಘಟಕ ವ್ಯವಸ್ಥಾವಕರು ದೂರವಾಣಿ ಸಂಖ್ಯೆ 7760990723

ಮಂಗಳೂರು ಮುಂಗಡ ಬುಕ್ಕಿಂಗ್‌ಕೌಂಟರ್ ದೂರವಾಣಿ ಸಂಖ್ಯೆ 9063211553

ಮಂಗಳೂರು ಬಸ್ ನಿಲ್ದಾಣ ದೂರವಾಣಿ ಸಂಖ್ಯೆ: 7760990720 ಸಂಪರ್ಕಿಸುವಂತೆ ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ  ತಿಳಿಸಿದ್ದಾರೆ.