ಶಿರ್ವ: ಕಾಲೇಜು ವಿದ್ಯಾರ್ಥಿ ನಾಪತ್ತೆ.

ಶಿರ್ವ: ಆನಂದತೀರ್ಥ ಕಾಲೇಜಿನಲ್ಲಿ 2ನೇ ವರ್ಷದ ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದು ಕಟ್ಟಿಂಗೇರಿ ಗ್ರಾಮದ ಧನುಷ್ ಜಿ (20) ಎಂಬ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ.

ಸೆ.23 ರಂದು ಬೆಳಿಗ್ಗೆ 7.00 ಗಂಟೆಗೆ ಮನೆಯಿಂದ ಹೊರಟು ಹೋಗಿದ್ದು ಸಂಜೆ 7.00 ಯಾದರೂ ವಾಪಾಸು ಮನೆಗೆ ಬಂದಿರುವುದಿಲ್ಲ. ಈತನ ಬಗ್ಗೆ ಆತನ ಸ್ನೇಹಿತರಲ್ಲಿ ಸಂಬಂದಿಕರಲ್ಲಿ ವಿಚಾರಿಸಿ ಈ ವರೆಗೂ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

ವಿದ್ಯಾರ್ಥಿ ಟೀ ಶರ್ಟ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದು ತುಳು, ಕನ್ನಡ, ಇಂಗ್ಲಿಷ್‌ ಹಿಂದಿ ಭಾಷೆ ಮಾತಾಡುತ್ತಿದ್ದು, 5.8 ಅಡಿ ಎತ್ತರ, ಕೋಲು ಮುಖ ಹೊಂದಿರುತ್ತಾನೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.