ಉಡುಪಿ: ಯುವಕ ನಾಪತ್ತೆ

ಉಡುಪಿ: ನಿಟ್ಟೂರಿನಲ್ಲಿರುವ ಬಾಳಿಗ ಫಿಶ್ನೆಟ್‌ನಲ್ಲಿ ಕೆಲಸ ಮಾಡಿ ಕೊಂಡಿದ್ದ ಬನಮಾಲಿ(29) ಎಂಬವರು ಸಮೀಪದ ಹಾಸ್ಟೆಲ್‌ನಲ್ಲಿ ವಾಸಮಾಡಿಕೊಂಡಿದ್ದು, ಸೆ.12ರಂದು ಮಧ್ಯಾಹ್ನ 12:30 ಗಂಟೆಗೆ ಹಾಸ್ಟೆಲ್‌ನಿಂದ ಹೊರಗಡೆ ಹೋದವರು ಈವರೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.