ಕುಂದಾಪುರ: ಗುಲ್ವಾಡಿ ಗ್ರಾಮದ ಕುಸುಮಾವತಿ (45) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಮನೆ ಮತ್ತು ತೋಟದ ಕೆಲಸ ಮಾಡಿಕೊಂಡು ಮಕ್ಕಳಾದ ಪ್ರೀಶಾ ಮತ್ತು ವರುಣೇಶ ಅವರೊಂದಿಗೆ ವಾಸವಿದ್ದು ಪತಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದಾರೆ. ಖಾಯಿಲೆಯಿಂದ ಗುಣಮುಖರಾಗದ ಬೇಸರದಿಂದ ಮನನೊಂದು ನೇಣು ಹಾಕಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.