ಕುಂದಾಪುರ:ಮಕ್ಕಳು ಉತ್ತಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಬಳ್ಕೂರಿನ ಜನ ಒಳ್ಳೆಯ ಮನಸ್ಸಿನವರು ಒಳ್ಳೆಯ ಕಾರ್ಯಗಳಿಗೆ ಹೆಗಲು ಕೊಡುತ್ತಾರೆ ದೇವತಾ ಕಾರ್ಯಗಳು ಮನಸ್ಸುಗಳನ್ನು ಒಂದು ಮಾಡುತ್ತವೆ. ನನ್ನ ಮೊದಲ ನಿರ್ದೇಶನದ ಸಂಗೀತ ಸಂಯೋಜನೆಯಾಗಿದ್ದು ಬಳ್ಕೂರಿನ ಫ್ರೆಂಡ್ಸ್ ಯುವಕ ಮಂಡಲ ತಂಡದವರು ಅಭಿನಯಿಸಿದ ನಾಟಕ ಪ್ರದರ್ಶನಕ್ಕೆ ಸಂಗೀತ ಸಂಯೋಜನೆ ಮಾಡಿದ್ದೇನೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ಬಳ್ಕೂರಿನಿಂದಲೇ ನನ್ನ ಸಂಗೀತ ಸಂಯೋಜನೆ ಆರಂಭಗೊಂಡು ಹಲವು ಸಿನಿಮಾಗಳಲ್ಲಿ ಇಂದು ನಿರ್ದೇಶನ ಮಾಡುತ್ತಿದ್ದೇನೆ.
ಬಹಳಷ್ಟು ಮಂದಿ ಕಲಾವಿದರು ಈ ಊರಿನಲ್ಲಿದ್ದಾರೆ. ಬಳ್ಕೂರು ಮತ್ತು ಬಸ್ರೂರು ಬೇರೆಬೇರೆಯಾಗಿ ಕಾಣಲು ಸಾಧ್ಯವಿಲ್ಲ ಇವೆರಡು ಊರುಗಳು ಸಮೀಪ ಇವೆ. ದೇವರು ಎಲ್ಲರಿಗೂ ಒಳ್ಳೆದು ಮಾಡಲಿ ಅದು ಎಷ್ಟು ಎಂದರೆ ಇನ್ನೊಬ್ಬರ ಬಗ್ಗೆ ಮಾತನಾಡಲು ಕೂಡ ಅವರಿಗೆ ಸಮಯ ಸಿಗದಷ್ಟು ಒಳ್ಳೆಯದು ಮಾಡಲಿ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಹೇಳಿದರು.
ಅವರು ಬಳ್ಕೂರಿನ ಫ್ರೆಂಡ್ಸ್ ಯುವಕ ಮಂಡಲ(ರಿ ) ಕಳುವಿನ ಬಾಗಿಲು ಇವರ ಆಶ್ರಯದಲ್ಲಿ ನಡೆದ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತ ತಾನು ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬಳ್ಕೂರು ಪ್ರತಿಭೆಯಾಗಿರುವ ಲೇಖಕರು, ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಕರುಣಾಕರ ಬಳ್ಕೂರು ಅವರನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಿ ಅಪ್ಪಣ್ಣ ಹೆಗ್ಡೆ ಇವರು ತಮ್ಮ ಅಮೃತಹಸ್ತದಲ್ಲಿ ಸನ್ಮಾನಿಸಿದರು.
ಕರುಣಾಕರ ಬಳ್ಕೂರು ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಯುವ ಸಮುದಾಯ ಊರುಗಳಲ್ಲಿ ಸಾಂಸ್ಕೃತಿಕ ಚಟುವಟಿಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ತಮ್ಮ ಅಂತರ್ ಸ್ನೇಹ ಸಂಬಂಧಗಳನ್ನು ಬೆಳಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಿ ಅಪ್ಪಣ್ಣ ಹೆಗ್ಡೆ ಅವರು ಗಣಪತಿಯ ಕಥೆಯನ್ನು ಹೇಳುತ್ತ ಗಣಪತಿಯು ತನ್ನ ತಂದೆತಾಯಿಗೆ ಒಂದು ಸುತ್ತು ಬರುವ ಮೂಲಕ ದೇವರನ್ನು ಕಂಡಿದ್ದಾನೆ ಅಂತೆಯೆ ನಾವು ಕೂಡ ಇಂದಿನ ಕಾಲದಲ್ಲಿ ತಂದೆತಾಯಿಯನ್ನು ದೇವರ ಹಾಗೆ ಕಾಣಬೇಕು ಎಂದು ಹೇಳಿದರು.
ರವೀಶ್ಚಂದ್ರ ಶೆಟ್ಟಿ ಅವರು ಮಾತನಾಡುತ್ತ ಗಣೇಶೋತ್ಸವವು ಸಾರ್ವಜನಿಕರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕುಂದಾಪುರದ ಪ್ರಸಿದ್ಧ ವಕೀಲರಾದ ರವೀಶ್ಚಂದ್ರ ಶೆಟ್ಟಿ, ಫ್ರೆಂಡ್ಸ್ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಪೂಜಾರಿ, ಕಾರ್ಯದರ್ಶಿ ನಾಗೇಶ್ ಶೇರಿಗಾರ್, ಗಣೇಶೋತ್ಸವದ ಸಮಿತಿ ಅಧ್ಯಕ್ಷರಾದ ಶ್ರೀ ದಿನಕರ ಬಳ್ಕೂರು, ಕಾರ್ಯದರ್ಶಿ ಅಶೋಕ ಪೂಜಾರಿ ಇತರ ಗಣ್ಯರು ಉಪಸ್ಥಿತರಿದ್ಧರು. ಶ್ರೀ ದಿನಕರ ಬಳ್ಕೂರು ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಯೋಗೀಶ್ ಬಳ್ಕೂರು ಇವರು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಅನ್ನದಾನ ಮಾಡಿರುವ ಮತ್ತು ಇತರ ಸೇವಾಕರ್ತರನ್ನು ಸನ್ಮಾನಿಸಿದರು. ವಿವಿಧ ಟ್ಯಾಬೋಗಳ ಮೂಲಕ ವಿಜೃಂಭಣೆಯ ಪುರ ಮೆರವಣಿಗೆಯ ಮೂಲಕ ಗಣೇಶನನ್ನು ವಾರಾಹಿ ನದಿಯಲ್ಲಿ ವಿಸರ್ಜಿಸಲಾಯಿತು.