ಗಂಗೊಳ್ಳಿ: ನಾವುಂದ ಗ್ರಾಮದ ಚಂದ್ರ (43) ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಮರವಂತೆ ಬಂದರಿನಿಂದ ದೋಣಿಯಲ್ಲಿ ಸಂಗಡಿಗರೊಂದಿಗೆ ಮೀನುಗಾರಿಕೆಗೆ ತೆರಳಿದ್ದಾಗ ಕುಸಿದು ಬಿದ್ದು ಬಳಿಕ ಮೃತಪಟ್ಟಿದ್ದಾರೆ.
ಗಾಳಿ ಮಳೆ ಒಮ್ಮೆಲೆ ಬೀಸಿದಾಗ ಕುಸಿದು ದೋಣಿಯಲ್ಲಿ ಬಿದ್ದು ಎದೆ ನೋವು ಎಂದು ಹೇಳಿ ಮೂರ್ಛೆ ಹೋದರು. ದೋಣಿಯಲ್ಲಿ ದಡಕ್ಕೆ ತಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ತಂದಿದ್ದು ಚಿಕಿತ್ಸೆಯಲ್ಲಿರುವಾಗ ಮೃತಪಟ್ಟಿದ್ದಾರೆ.