ಬ್ರಹ್ಮಾವರ: ಸ್ಕೂಟರ್-ಬೈಕ್ ನಡುವೆ ಅಪಘಾತ; ಸ್ಕೂಟರ್ ಸವಾರ ಮೃತ್ಯು.

ಬ್ರಹ್ಮಾವರ: ಸ್ಕೂಟರ್ ಮತ್ತು ಬೈಕ್ ಮಧ್ಯೆ ಸೆ.8ರಂದು ಮಧ್ಯಾಹ್ನ ವೇಳೆ ಕನ್ನಾರು- ಕೊಕ್ಕರ್ಣೆ ರಸ್ತೆಯ ಸಾಸ್ತಾವು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟು ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಸ್ಕೂಟರ್ ಸವಾರ ಸಹಿತ್ ತಂಡಿ ಎಂದು ಗುರುತಿಸಲಾಗಿದೆ.

ಕನ್ನಾರು ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ಕೊಕ್ಕರ್ಣೆ ಕಡೆಯಿಂದ ಕನ್ನಾರು ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಎರಡೂ ವಾಹನಗಳು ರಸ್ತೆಗೆ ಬಿದ್ದು ಸ್ಕೂಟರ್‌ನಲ್ಲಿದ್ದ ಸಹಿತ್ ತಂಡಿ ಹಾಗೂ ಬೈಕ್‌ನಲ್ಲಿದ್ದ ಸವಾರ ಮತ್ತು ಸಹಸವಾರ ಗಾಯಗೊಂಡರೆನ್ನ ಲಾಗಿದೆ. ಇದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಸಹಿತ್ ತಂಡಿ ಮಣಿಪಾಲ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.