ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಗಣೇಶ ಚತುರ್ಥಿ ಹಬ್ಬ ಆಚರಣೆ

ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಗಣಪತಿಯ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದರೆ, ಸಾರ್ವಜನಿಕ ಗಣೇಶೋತ್ಸವದಿಂದ ಆಚರಣೆಗೆ ಹೊಸ ಕಳೆ ಬಂದಿದೆ.

Oplus_0

ಉಡುಪಿ ಜಿಲ್ಲೆಯ ಸುಮಾರು 472 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇಂದು ಮುಂಜಾನೆ ಗಣೇಶ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. ಗಣ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ .ಕೆಲವು ಕಡೆ ಒಂದು ದಿನ ಮಾತ್ರ ಗಣಪತಿ ಇಟ್ಟರೆ, ಇನ್ನು ಹಲವಡೆ ಎರಡರಿಂದ 9 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ಪ್ರತಿದಿನ ಒಂದಲ್ಲ ಒಂದು ಕಡೆಯ ಸಾರ್ವಜನಿಕ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ . ಹೆಚ್ಚಾಗಿ ಮಲ್ಪೆ ಕಡಲ ತೀರಕ್ಕೆ ಪೂಜಿತ ಗಣಪನ ವಿಸರ್ಜನೆ ಮಾಡಲಾಗುತ್ತದೆ .ಈ ವೇಳೆ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಟ್ ಆಗುತ್ತದೆ. ಅದರಲ್ಲೂ ಕರಾವಳಿಯ ಹಬ್ಬಗಳೆಂದರೆ ಹುಲಿವೇಷದ್ದೇ ಅಬ್ಬರ. ಈ ಬಾರಿಯ ಗಣೇಶ ಚತುರ್ಥಿಯಲ್ಲೂ ಹುಲಿ ವೇಷದಾರಿಗಳು ತಂಡವಾಗಿ ಕುಣಿದು ಜನರನ್ನು ರಂಜಿಸುವುದರ ಜೊತೆಗೆ ದೇವರ ಸೇವೆ ಮಾಡುತ್ತಿದ್ದಾರೆ.

Oplus_0