ಉಡುಪಿ: ಟ್ರಸ್ಟ್ ಫಾರ್ ರೂರಲ್ ಅಪ್ಲಿಫ್ಟ ಮೆಂಟ್ ಸ್ಟ್ರಾಟಜೀಸ್ ಬೆಂಗಳೂರು ವತಿಯಿಂದ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಎಲ್ ಕೆ ಜಿ ಇಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು, ಕುಂದಾಪುರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ “ಅಮೂಲ್ಯ ” (6ನೇ ತರಗತಿ) ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ/ ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.