ಅತ್ಯಾಚಾರ ಪ್ರಕರಣ: ಇಡೀ ಉಡುಪಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತ ಕೃತ್ಯ; ಈ ಕೃತ್ಯದಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಗ್ರಹ

ಉಡುಪಿ: ಕಾರ್ಕಳದಲ್ಲಿ ನಡೆದ ಓರ್ವ ಹಿಂದೂ ಸಹೋದರಿಯ ಅತ್ಯಾಚಾರ ಪ್ರಕರಣ ಇಡೀ ಉಡುಪಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತದ್ದು ಈ ರೀತಿಯ ಪ್ರಕರಣಗಳು ಉತ್ತರ ಭಾರತದಲ್ಲಿ ನಮಗೆ ನೋಡಲು ಸಿಗುವುದಿದ್ದರೂ ಕೂಡ, ಇಂತಹ ಒಂದು ಪ್ರವೃತ್ತಿ ಅದರಲ್ಲೂ ಕ್ರೂರಿ ಯುವಕರಿಗೆ ಇಂತಹ ದುಷ್ಕೃತ್ಯ ಮಾಡುವ ಯೋಚನೆ ಬರಬೇಕಾದರೆ ಅವರಿಗೆ ಕಾನೂನಿನ ಭಯ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಕುಕೃತ್ಯಗಳು ಮುಂದೆ ನಡೆಯದಂತೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕಾರ್ಯೋನ್ಮುಖವಾಗಬೇಕು ಮತ್ತು ಕುಕೃತ್ಯದಲ್ಲಿ ಭಾಗಿಯಾದಂತಹ ಕ್ರೂರಿ ಯುವಕರಿಗೆ ಗಲ್ಲು ಶಿಕ್ಷೆಯಾಗುವ ತನಕ ಅತೀ ಶೀಘ್ರದಲ್ಲಿ ಈ ಒಂದು ಕಾನೂನು ಹೋರಾಟ ತಾರ್ಕಿಕ ಅಂತ್ಯವನ್ನು ಮುಟ್ಟುವಂತಹ ವ್ಯವಸ್ಥೆ ಮಾಡಬೇಕೆಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪೊಲೀಸ್ ಆಗ್ರಹ ವ್ಯಕ್ತಪಡಿಸಿದ್ದಾರೆ.