ಆ.27ರಂದು ಉಡುಪಿ ಶಿರೂರು ಮಠದ ಮುಂಭಾಗದಲ್ಲಿ ಹುಲಿವೇಷ, ಜಾನಪದ ನೃತ್ಯ ಕಾರ್ಯಕ್ರಮ

ಉಡುಪಿ: ಶಿರೂರು ಪೀಠಾಧಿಪತಿಗಳಾದ ವೇದವರ್ಧನ ತೀರ್ಥ ಶ್ರೀಪಾದರು, ಕೀರ್ತಿಶೇಷ ಲಕ್ಷ್ಮೀವರತೀರ್ಥ ಶ್ರೀಪಾದರು‌ ವಿಟ್ಲಪಿಂಡಿ ಮಹೋತ್ಸವದಂದು ನಡೆಸಿಕೊಂಡು ಬಂದಂತಹ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಶಿರೂರು ಮಠದ ಮುಂಭಾಗದ ಅನ್ನವಿಠಲ್ ವೇದಿಕೆಯಲ್ಲಿ ಈ ಬಾರಿಯು ಆಯೋಜಿಸಲು ಸಂಕಲ್ಪಿಸಿದ್ದಾರೆ ಎಂದು ಮಠದ ದಿವಾನ ಉದಯಕುಮಾ‌ರ್ ಸರಳತ್ತಾಯ ಹೇಳಿದರು.

ಉಡುಪಿ ಶಿರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದಂದು ಕೀರ್ತಿಶೇಷ ಲಕ್ಷ್ಮೀವರತೀರ್ಥ ಶ್ರೀಪಾದರು ಉಡುಪಿಯ ಜನತೆಗೆ ಶ್ರೀ ಕೃಷ್ಣ ಮಠದ ರಥಬೀದಿಯ ಶಿರೂರು ಮಠದ ಮುಂಭಾಗದಲ್ಲಿನ ‘ಅನ್ನವಿಠಲ್ ವೇದಿಕೆಯಲ್ಲಿ ಹುಲಿ ವೇಷ, ಜಾನಪದ ನೃತ್ಯ, ಸಣ್ಣಪುಟ್ಟ ವೇಷಭೂಷಣಗಳನ್ನು ಧರಿಸಿಕೊಂಡು ಬಂದಂತಹ ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಶ್ರೀ ಕೃಷ್ಣನ ಲೀಲೋತ್ಸವದ ದಿನವಾದ ವಿಟ್ಲಪಿಂಡಿಯನ್ನು‌ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಈ ಸಂಪ್ರದಾಯವನ್ನು‌ ವೇದವರ್ಧನತೀರ್ಥ ಶ್ರೀಪಾದರು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದಾರೆ ಎಂದರು.

ಉಡುಪಿ ಶಾಸಕ ಯಶ್ ಪಾಲದ ಸುವರ್ಣ ಅವರು ಸಹಕಾರದೊಂದಿಗೆ ಮುಖ್ಯಪ್ರಾಣ ಸೇವಾ ಬಳಗದ ಸದಸ್ಯರೊಂದಿಗೆ ಮತ್ತು ಶಿರೂರು ಮಠದ ಶಿಷ್ಯ ವೃಂದದವರೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಸಾಮಾಜಿಕ ಕಾರ್ಯಕರ್ತ ಮೋಹನ್ ಭಟ್ ಉಪಸ್ಥಿತರಿದ್ದರು.