ಉಡುಪಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಉಡುಪಿಯ ಪಡುಕೆರೆ ನಿವಾಸಿಗಳು ಬೃಹತ್ ಮಾನವ ಸರಪಳಿ ರಚಿಸಿದ್ದಾರೆ. ಬಾಂಗ್ಲಾದಲ್ಲಿ ಅರಾಜಕತೆ ಮನೆ ಮಾಡಿದ್ದು, ಅಲ್ಲಿ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರ ವಿರುದ್ಧ ಕುದ್ರು ನಿವಾಸಿಗಳು ಮನೆಯಿಂದ ಹೊರ ಬಂದು ಮಾನವ ಸರಪಳಿ ರಚಿಸಿದರು.
ಪಡುಕೆರೆಯ ಶನೀಶ್ವರ ದೇವಸ್ಥಾನ ಬಳಿಯಿಂದ ಮಾನವ ಸರಪಳಿ ಆರಂಭವಾಗಿದ್ದು, ಒಂದು ಭಾಗದಲ್ಲಿ ಸಮುದ್ರ ಮತ್ತೊಂದು ಭಾಗದಲ್ಲಿ ನದಿ ಇರುವ ಭೂಪ್ರದೇಶದಲ್ಲಿ ಪಡುಕೆರೆಯಿಂದ ಮಟ್ಟು ತನಕ ಮಾನವ ಸರಪಳಿ ರಚನೆ ಮಾಡಲಾಯಿತು. ಮಹಿಳೆಯರು ವೃದ್ಧರು ಯುವಕರು ಈ ಅಭಿಯಾನದಲ್ಲಿ ಜೋಡಣೆಗೊಂಡರು.
ಕಾರ್ಯಕ್ರಮದಲ್ಲಿ ಯಾವುದೇ ಭಾಷಣ ಇರಲಿಲ್ಲ. ಬೋರ್ಡ್ ಗಳನ್ನು ಹಿಡಿದು ಬಾಂಗ್ಲಾದ ಹಿಂದೂ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದು ಈ ಮೂಲಕ ಒತ್ತಾಯಿಸಲಾಯ್ತು. ಪ್ರಪಂಚದ ದೇಶದ ಎಲ್ಲೇ ಹಿಂದೂ ಸಮಾಜಕ್ಕೆ ಅನ್ಯಾಯ ಆದಾಗ ಸ್ವಯಂ ಪ್ರೇರಿತವಾಗಿ ಜನ ಬಂದು ಅದಕ್ಕೆ ಸ್ಪಂದಿಸಬೇಕು. ಘಟನೆ ವಿರುದ್ಧ ಧನಿ ಎತ್ತಬೇಕು. ಆ ಉದ್ದೇಶದಿಂದ ಪಡುಕೆರೆಯಲ್ಲಿ ಮಾನವ ಸರಪಳಿ ಮಾಡಿದ್ದೇವೆ ಎಂದು ಸ್ಥಳೀಯ ಪ್ರಕಾಶ್ ಮಲ್ಪೆ ಹೇಳಿದರು.