ಹಿರಿಯಡಕ: ಅಕ್ಷಯಾಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ತೃತೀಯ ವಾರ್ಷಿಕ ಮಹಾಸಭೆ.

ಹಿರಿಯಡಕ: ಅಕ್ಷಯಾಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ತೃತೀಯ ವಾರ್ಷಿಕ ಮಹಾಸಭೆಯು ಆ.17 ರಂದು ಸೊಸೈಟಿ ಅಧ್ಯಕ್ಷ ಶ್ರೀಕಾಂತ ಕಾಮತ್ ಅವರ ಅಧ್ಕಕ್ಷತೆಯಲ್ಲಿ ಸುರಭಿ ಸಭಾಭವನ ಕೊಟ್ನಕಟ್ಟೆಯಲ್ಲಿ‌ ನಡೆಯಿತು.

ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ ನಾಯಕ್ ರವರು 2024 – 25ನೇ ಸಾಲಿನ ಆಯವ್ಯಯ ಆಸ್ತಿ ಜವಾಬ್ದಾರಿಯ ವಿವರವನ್ನು ಮಂಡಿಸಿದರು. ಸಭೆಯಲ್ಲಿ ಆಯವ್ಯಯವು ಸರ್ವಾನುಮತದಿಂದ ಅಂಗೀಕಾರಗೊಂಡು 2024 – 25ನೇ ಸಾಲಿನ ಬಜೆಟ್ ಮಂಡಿಸಿದರು. ಸಭೆಯಲ್ಲಿ ಬಜೆಟ್ ಅಂಗೀಕಾರಗೊಂಡಿತು.

ಸಭೆಯಲ್ಲಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡ ಡಾ. ಲಕ್ಷ್ಮೀ ನಾರಾಯಣ ಉಪಾಧ್ಯ ಹಾಗೂ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿ ಕೊಂಡು ವಾಲ್ಮೀಕಿ ರಾಮಾಯಣ ವನ್ನು ಕೊಂಕಣಿ ಭಾಷೆಯಲ್ಲಿ ಬರೆದ ನಾರಾಯಣ ಗವಳ್ಕರ್ ಮತ್ತು ಪ್ರಗತಿಪರ ಕೃಷಿಕರು ಪದ್ಮನಾಭ ಕಾಮತ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರ ಡಾ. ಲಕ್ಷ್ಮೀನಾರಾಯಣ ಉಪಾಧ್ಯ ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಸನ್ಮಾನ ಮಾಡಿದಬಗ್ಗೆ ಕೃತಜ್ಞತೆ ವ್ಯಕ್ತ ಪಡಿಸಿದರು. ಪದ್ಮನಾಭ ಕಾಮತ್ ಅವರು ತಮ್ಮ ಕೃಷಿಯ ಬಗ್ಗೆ ಮಾಹಿತಿ ಹಂಚಿದರು. ನಾರಾಯಣ ಗವಳ್ಕರ್ ಅವರು ತಮ್ಮ ಸಾಹಿತ್ಯ ವನ್ನು ಬೆಳೆಸಿದ ರೀತಿಯನ್ನು ವಿವರಿಸಿದರು. ಸಂಘಕ್ಕೆ ವಿಶೇಷ ಸೇವೆಯನ್ನು ಸಲ್ಲಿಸಿದ ನಮ್ಮ ಸಂಸ್ಥೆಯ ಹಿತೈಶಿಗಳಿಗೆ ಗೌರವಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀಕಾಂತ್ ಕಾಮತ್, ಉಪಾಧ್ಯಕ್ಷರಾದ ಗಿರೀಶ್ ಪ್ರಭು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರಾದ ಜನಾರ್ಧನ ಆರ್ ನಾಯಕ್, ಪ್ರಕಾಶ್ ನಾಯಕ್ ಬೆಲ್ಪತ್ರೆ , ಸುದರ್ಶನ ಪ್ರಭು , ರವೀಂದ್ರ ಕುಮಾರ್ ಪ್ರಭು, ಶಾಂತಾರಾಮ ಸಾಲ್ವಂಕರ್ , ಶ್ರೀಮತಿ ಸಂಧ್ಯಾ ಕಾಮತ್, ರಮಾನಂದ ಪ್ರಭು, ವಿಶ್ವನಾಥ ನಾಯಕ್ , ಶ್ರೀಮತಿ ಆಶಾ ಕಾಮತ್ , ಶ್ರೀಮತಿ ವಿಜಯಲಕ್ಷ್ಮಿ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಾಮತ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಯೋಜನೆಗಳ ಬಗ್ಗೆ ವಿವರಿಸಿದರು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಸಂಸ್ಥೆಗೆ ಸಹಕಾರ ನೀಡಿದ ಎಲ್ಲ ಸದಸ್ಯರನ್ನು ಅಭಿನಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುದರ್ಶನ ಆಚಾರ್ಯ ಮುದರಂಗಡಿ ಇವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವು ಶ್ರೀಮತಿ ಸಂಧ್ಯಾ ಕಾಮತ್ ಮತ್ತು ಆಶಾ ಕಾಮತ್ ರವರ ಪ್ರಾರ್ಥನೆ ಗೈದರು. ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ವಿಜಯಲಕ್ಷ್ಮೀ ಸ್ವಾಗತಿಸಿದರು.

ನಿರ್ದೇಶಕರಾದ ನೂಜಿ ಜನಾರ್ಧನ ನಾಯಕ್ ವಂದಿಸಿದರು. ರವೀಂದ್ರ ಕುಮಾರ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.