ಉಡುಪಿ: ಕಾಂತಾರ ಚಿತ್ರಕ್ಕೆ ಎರಡು ನ್ಯಾಷನಲ್ ಫಿಲ್ಮ್ ಅವಾರ್ಡ್; ಖುಷಿ ಹಂಚಿಕೊಂಡ ನಟಿ ಮಾನಸಿ ಸುಧೀರ್.

ಉಡುಪಿ: ಕಾಂತಾರ ಚಿತ್ರಕ್ಕೆ ಎರಡು ನ್ಯಾಷನಲ್ ಫಿಲ್ಮ್ ಅವಾರ್ಡ್ ಲಭಿಸಿದ್ದು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿಯ ತಾಯಿಯ ಪಾತ್ರ ಮಾಡಿದ್ದ ಮಾನಸಿ ಸುಧೀರ್ ಅವರು ಉಡುಪಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಮಹಾಲಕ್ಷ್ಮೀ ಹಬ್ಬದ ದಿನ ಅವಾರ್ಡ್ ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ಮಹಾಲಕ್ಷ್ಮೀ ದಿನ ನಾನು ನಟನೆ ಮಾಡಿರುವ ಎರಡು ಚಿತ್ರ ರಿಲೀಸ್ ಆಗಿದೆ. ಅದರ ಜೊತೆ ಅವಾರ್ಡ್ ಕೂಡ ಸಿಕ್ಕಿರುವುದು ತುಂಬಾ ಖುಷಿಯಾಗುತ್ತಿದೆ. ರಿಷಬ್ ಸರ್ ಗೆ ಅಭಿನಂದನೆ ಜೊತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹೊಂಬಾಳೆ ಕ್ರಿಯೆಷನ್ ಗು ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಇದು ಇಡೀ ಚಿತ್ರತಂಡ ತುಂಬಾ ಸಂತೋಷ ಪಡುವ ವಿಚಾರ. ಅವಾರ್ಡ್ ಘೋಷಣೆಯಾದ ಬಳಿಕ ಕಾಂತಾರ ಚಿತ್ರದೊಳಗಿದ್ದ ಎಲ್ಲಾ ಕ್ಷಣಗಳು ನೆನಪಾಗುತ್ತಿದೆ. ಚಿತ್ರಕ್ಕೆ ಸಾಕಷ್ಟು ಅವಾರ್ಡ್ ಗಳು ಸಿಕ್ಕಿತು, ನ್ಯಾಷನಲ್ ಅವಾರ್ಡ್ ಸಿಗುವ ಬಗ್ಗೆ ಭರವಸೆ ಇತ್ತು. ಈಗ ಅವಾರ್ಡ್ ಸಿಕ್ಕಿರುವುದು ನಮ್ಮ ಸಂತಸವನ್ನು ಮತ್ತಷ್ಟು ಹೆಚ್ಚು ಮಾಡಿದೆ ಎಂದು ತಿಳಿಸಿದರು.