ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆ : ಸ್ವಾತಂತ್ರೋತ್ಸವ ಸಂಭ್ರಮಾಚರಣೆ

ಕಟಪಾಡಿ: ಕಟಪಾಡಿಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಟಪಾಡಿಯ ಎಸ್.ವಿ.ಎಸ್ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದರ ಮುಖಾಂತರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ್ರಹ್ಮಾವರ ವಲಯದ ಕರ್ನಾಟಕ ಅರಣ್ಯ ಇಲಾಖೆಯ ಗಸ್ತು ವನಪಾಲಕರಾದ (Beat Forester) ಹವಾಲ್ದಾರ್ ಶ್ರೀ ಕೇಶವ ಪೂಜಾರಿ ಎಂ ಅವರು ದ್ವಜಾರೋಹಣ ನೆರವೇರಿಸಿ, “ದೇಶ ಸೇವೆಯೇ ಈಶ ಸೇವೆ ” ಎಂಬ ನುಡಿ ಮುತ್ತಿನಂತೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದೆಂದರೆ ಅದೊಂದು ಹೆಮ್ಮೆಯ ವಿಚಾರ . ಆದ್ದರಿಂದ ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಭಾರತೀಯ ಸೇನೆಯ ಕಡೆಗೆ ಒಲವು ಮೂಡಿಸುವುದು ಅಗತ್ಯವಾಗಿದೆ. ನಾವು ಸ್ವತಂತ್ರವಾಗಿ ಬದುಕಲು ಭಾರತಾಂಬೆ ತನ್ನ ಮಡಿಲಿನಲ್ಲಿ ಆಶ್ರಯವನ್ನು ಕೊಟ್ಟಿದ್ದಾಳೆ ಹಾಗಿರುವಾಗ ಅವಳಿಗೆ ಸದಾ ಹಸಿರಿನ ಉಡುಗೆಯನ್ನು ತೊಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು .

ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ ಎ ಗೋಪಾಲಕೃಷ್ಣ ಭಟ್ ರವರು , “ಸರ್ವೇ ಜನ ಸುಖಿನೋ ಭವಂತು” ಎಂದು ಹೇಳುವ ದೇಶ ನಮ್ಮದು ಆದರೆ ಇತ್ತೀಚಿನ ದಿನಗಳಲ್ಲಿ ಕೋಮುಗಲಭೆಯಿಂದ ತುಂಬಿ ಹೋಗುತ್ತಿದೆ. ನಮ್ಮ ದೇಶದ ಪೀಳಿಗೆಗೆ ರಾಷ್ಟ್ರವನ್ನು ಬದಲಾಯಿಸುವ ಶಕ್ತಿ ಇದೆ ಹಾಗಾಗಿ ಇಂದಿನಿಂದಲೇ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳೋಣ ಎಂದರು.

ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಸದಸ್ಯರು , ತ್ರಿಶಾ ಸಿಬ್ಬಂದಿ ವರ್ಗ ಹಾಗೂ ಎಸ್.ವಿ.ಎಸ್ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.