ಕಾರ್ಕಳ: ಬದುಕು ರೂಪಿಸುವ ವೃತ್ತಿಯ ಮುಖಾಂತರ ಛಾಯಾಗ್ರಹಣ ರಂಗಕ್ಕೆ ಇಳಿದ ಛಾಯಾಮಿತ್ರರು ನಿಸ್ವಾರ್ಥ ಸೇವೆಯಿಂದ ಸಂಘಟನೆಯಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕೆಲಸಗಳ ಮುಖಾಂತರ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಎಸ್.ಕೆ.ಪಿ.ಎ ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲ್ವೀಸ್ ಹೇಳಿದ್ದಾರೆ.
ಅವರು ಎಸ್.ಕೆ.ಪಿ.ಎ ಕಾರ್ಕಳ ವಲಯದ 14ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಸಂಚಾಲಕ ವಿಠ್ಠಲ್ ಚೌಟ ಮಾತನಾಡಿ, ಪ್ರತಿಯೊಬ್ಬ ಸದಸ್ಯರು ಸಂಘಟನೆಯ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುವುದರ ಮೂಲಕ ಸಂಘಟನೆಯನ್ನು ಬಲಪಡಿಸಬೇಕಾಗಿದೆ, ಸಂಘಟನೆ ಬಲಿಷ್ಟವಾದಾಗ ಮಾತ್ರ ಛಾಯಾಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ ಎಂದರು.
ಸಭಾಧ್ಯಕ್ಷತೆ ವಹಿಸಿದ ಕಾರ್ಕಳ ವಲಯದ ಅಧ್ಯಕ್ಷ ಭಾಸ್ಕರ್ ಕುಲಾಲ್ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ್, ಎಸ್.ಕೆ.ಪಿ.ಎ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಸಾದ್ ಐಸಿರ, ಜಿಲ್ಲಾ ಜೊತೆ ಕಾರ್ಯದರ್ಶಿ ಸುಶೀಲ್ ಕುಮಾರ್, ವಲಯದ ವಿವಿದೊದ್ದೇಶ ಬ್ಯಾಂಕ್‌ನ ನಿರ್ದೇಶಕ ದತ್ತಾತ್ರೇಯ ಉಪಸ್ಥಿತರಿದ್ದರು.
ಎಸ್.ಕೆ.ಪಿ.ಎಯ ಗೌರವಾಧ್ಯಕ್ಷ ಪದ್ಮಪ್ರಸಾದ್‌ಜೈನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸೀತಾರಾಮ್ ವರದಿ ವಾಚಿಸಿದರು. ಕೋಶಾಧಿಕಾರಿ ಯೋಗೀಶ್ ಲೆಕ್ಕಪತ್ರ ಮಂಡಿಸಿದರು. ನಿಕಟಪೂರ್ವ ಅಧ್ಯಕ್ಷ ವಿಶ್ವಾಸ್ ಡೋಂಗ್ರೆ ವಂದಿಸಿ, ರೋನಾಲ್ಡ್ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.