ಉಡುಪಿ: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ)ನಲ್ಲಿ ಮಹಿಳೆಯರಿಗಾಗಿ ಆಗಸ್ಟ್ 26ರಿಂದ 31ರ ವರೆಗೆ 6 ದಿನಗಳ ಉಚಿತ ಗೃಹ ಉತ್ಪನ್ನಗಳ ತಯಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಆ. 21ರೊಳಗೆ ದೂರವಾಣಿ ಸಂಖ್ಯೆ 0820 2570 263 ಗೆ ಕರೆ ಮಾಡಿ ಹೆಸರನ್ನು ನೊಂದಾಯಿಸಬೇಕು. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಆ. 26ರ ಬೆಳಿಗ್ಗೆ 9.30ಕ್ಕೆ ಬಿವಿಟಿಯಲ್ಲಿ ಹಾಜರಿರಬೇಕು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.