ಉಡುಪಿ: ಎಬಿವಿಪಿಯಿಂದ ನೆರೆ ಸಂತ್ರಸ್ತರಿಗೆ ಧನ ಸಂಗ್ರಹಕ್ಕೆ ಚಾಲನೆ

ಉಡುಪಿ: ಉಡುಪಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಹಮ್ಮಿಕೊಂಡ ಉತ್ತರ ಕರ್ನಾಟಕದ
ನೆರೆ ಸಂತ್ರಸ್ತರಿಗೆ ಸಹಾಯ ಧನ ಸಂಗ್ರಹ ಕಾರ್ಯಕ್ಕೆ ಭಾರತೀಯ ಮಹಿಳಾ ಆಯೋಗದ ಸದಸ್ಯೆ‌ ಶ್ಯಾಮಲಾ ಕುಂದರ್‌ ಹಾಗೂ ಡಾ. ಶಿವಾನಂದ ನಾಯಕ್‌ ಶನಿವಾರ ಚಾಲನೆ ನೀಡಿದರು.
ಸಂಗ್ರಹವಾದ ಮೊತ್ತವನ್ನು ಸೇವಾ ಭಾರತೀ ಟ್ರಸ್ಟ್‌ ಮುಖಾಂತರ ನೆರೆ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ತಿನ ಕಾರ್ಯರ್ತರು ಇದ್ದರು.