ಉಡುಪಿ: ಮೂಡುಸಗ್ರಿ ವಾರ್ಡಿನ ಇಂದ್ರಾಳಿ ಸಗ್ರಿ ಶಾಲೆ ಸಂಪರ್ಕ ರಸ್ತೆಯ ಕಿರು ಸೇತುವೆ ಕುಸಿತಗೊಂಡಿರುವ ಸ್ಥಳಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಿರು ಸೇತುವೆ ಹಾನಿಯಾಗಿ ವಾಹನ ಸಂಚಾರ ನಿಷೇಧವಾದ ಹಿನ್ನೆಲೆಯಲ್ಲಿ ಈ ಭಾಗದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಈಗಾಗಲೇ ನಗರಸಭೆಯ ಮೂಲಕ ಹೊಸ ಕಿರು ಸೇತುವೆಗೆ 9.50 ಲಕ್ಷ ರೂ. ಅನುದಾನ ಒದಗಿಸಿದ್ದು, ತಕ್ಷಣ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಭಾರತಿ ಪ್ರಶಾಂತ್, ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಪಕ್ಷದ ಪ್ರಮುಖರಾದ ಪ್ರಶಾಂತ್, ಹೇಮಂತ, ಸದಾನಂದ ನಾಯಕ್, ಸುಮಾ ನಾಯ್ಕ್ , ನಗರಸಭೆಯ ಎ ಇ ಇ ದುರ್ಗಾಪ್ರಸಾದ್, ಇಂಜಿನಿಯನರ್ ಚೇತನ್ ಮೊದಲಾದವರು ಉಪಸ್ಥಿತರಿದ್ದರು.