ಉಡುಪಿ: ಉಡುಪಿ ಅಂಬಲಪಾಡಿ ಬೈಪಾಸ್ ನಲ್ಲಿರುವ ಹಾಲು ಮಾರಾಟ ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ದೋಚಿರುವ ಘಟನೆ ನಡೆದಿದೆ.
ಉಡುಪಿಯ ಬೈಪಾಸ್ ರಸ್ತೆಯ ಪೃಥ್ವಿ ಸೌಧದಲ್ಲಿರುವ ಅರುಣ್ ಶೆಟ್ಟಿ ಮಾಲಕತ್ವದ ಹಾಲು ಡಿಸ್ಟ್ರಿಬ್ಯೂಟರ್ ಸೆಂಟರ್ ನ ಬೀಗ ಮುರಿದು ರಾತ್ರಿ 11.30 ಕ್ಕೆ ನುಗ್ಗಿರುವ ಕಳ್ಳನೋರ್ವ ರೂ.35 ಸಾವಿರ ಹಣವನ್ನು ಲಪಟಾಯಿಸಿದ್ದಾನೆ.
ಒಂದು ಕಡೆಯ ಬೀಗ ಮುರಿದು ಕಳ್ಳತನ ನಡೆಸಿದ್ದು , ಸಿಸಿಟಿವಿಯಲ್ಲಿ ಕಳ್ಳತನದ ವಿಡಿಯೋ ರೆಕಾರ್ಡ್ ಆಗಿದೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳನ ಹುಡುಕುತ್ತಿದ್ದಾರೆ.