ಹೆಬ್ರಿ: ಈಜಲು ಹೋದ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಆ.9ರಂದು ಮಧ್ಯಾಹ್ನ ವೇಳೆ ಶಿವಪುರ ಹಳೆಬೆಟ್ಟು ಎಲಗೊಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಸುವರ್ಣ ಲತಾ ಎಂಬವರ ಮಗ ಸಿದ್ವೀಕ್(16) ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿ ಜೊತೆ ತನ್ನ ಅಜ್ಜಿ ಮನೆಯಾದ ಎಲಗೊಳಿಗೆ ಆ.7ರಂದು ಬಂದಿದ್ದು ಆ.9ರಂದು ಮಧ್ಯಾಹ್ನ ವೇಳೆ ಮನೆಯ ಎದುರಿನ ಕೆರೆಯಲ್ಲಿ ಈಜಲು ಹೋಗಿದ್ದನು.
ಈ ವೇಳೆ ಆತ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು ಕೂಡಲೇ ಆತನ ಮಾವ ಆತನನ್ನು ನೀರಿನಿಂದ ಮೇಲೆ ಎತ್ತಿ ತಂದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಿದ್ವೀಕ್ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟಿದ್ದರೆಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.