ಕುಂದಾಪುರ: ವ್ಯಕ್ತಿಯೊಬ್ಬ ಸ್ಕೂಟರ್ನಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಘಟನೆಯು ಗುಜ್ಜಾಡಿ ಗ್ರಾಮದ ನಾಯಕವಾಡಿ ಜಟ್ಟಪ್ಪ ಸರ್ಕಲ್ ಬಳಿ ಆ. 9 ರಂದು ನಡೆದಿದೆ.
ಗಂಗೊಳ್ಳಿ ಠಾಣಾ ಎಸ್ಐ ಹರೀಶ್ ಆರ್. ಅವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ದನದ ಮಾಂಸ ಪತ್ತೆಯಾಗಿದೆ.
ಗಂಗೊಳ್ಳಿಯ ಅಶ್ಫಾಕ್ ಸುಬೇದಾರ್ (52) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಎಲ್ಲಿಂದಲೋ ದನವನ್ನು ಕಳವು ಮಾಡಿ, ಇತರರೊಂದಿಗೆ ವಧೆ ಮಾಡಿ, ಮಾಂಸ ಮಾಡಿ, ಅದನ್ನು ಮಾರಾಟ ಮಾಡಲು ಸ್ಕೂಟರ್ನಲ್ಲಿ 3 ಪ್ಲಾಸ್ಟಿಕ್ ಚೀಲಗಳಲ್ಲಿ ಕೊಂಡೊಯ್ಯುತ್ತಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.