ಕಾರ್ಕಳ: ಬೈಕ್ ಹಾಗೂ ಟೆಂಪೋ ನಡುವಿನ ಅಪಘಾತದಲ್ಲಿ ಯುವ ಉದ್ಯಮಿ ಕಾಶಿನಾಥ್ (38) ಅವರು ಮೃತಪಟ್ಟಿರುವ ಘಟನೆ ಮಿಯ್ನಾರು ಬಳಿಯ ನಲ್ಲೂರು ಬಸದಿ ತಿರುವಿನಲ್ಲಿ ಆ.6 ರಂದು ನಡೆದಿದೆ.
ಕಲ್ಯಾದ ಹಾಳೆಕಟ್ಟೆಯಲ್ಲಿ ಸಲೂನ್ ಅಂಗಡಿ ಹೊಂದಿದ್ದ ಅವರು ಆ. 5ರಂದು ರಾತ್ರಿ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಸದಿ ತಿರುವಿನಲ್ಲಿ ಮನೆ ಕಡೆಗೆ ಬೈಕ್ ತಿರುಗಿಸುವಾಗ ಎದುರಿನಿಂದ ವೇಗವಾಗಿ ಬಂದ ಟೆಂಪೋವೊಂದು ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಶಿನಾಥ್ ಅವರನ್ನು ಕೂಡಲೇ ಕಾರ್ಕಳದ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಕಲ್ಯಾ ಹಾಳೆಕಟ್ಟೆಯ ಚೈತನ್ಯ ಮಿತ್ರ ಮಂಡಳಿಯಲ್ಲಿ ಅಧ್ಯಕ್ಷರಾಗಿ ಕಾರ್ಯರ್ನಿಹಿಸಿದ್ದ ಅವರು ಅವಿವಾಹಿತರಾಗಿದ್ದು, ತಾಯಿ ಮತ್ತು ಸಹೋದರರಿಬ್ಬರನ್ನು ಅಗಲಿದ್ದಾರೆ.












