ಕೊಡವೂರು ರಿಕ್ಷಾ ನಿಲ್ದಾಣ ರಾಜ್ಯಕ್ಕೆ ಮಾದರಿ: ವಿಜಯ ಕೊಡವೂರು.

ಉಡುಪಿ: ಕೊಡವೂರು ರಿಕ್ಷಾ ನಿಲ್ದಾಣದ ಕಾರ್ಯಕರ್ತರು ಎಲ್ಲಾ ಸಂದರ್ಭದಲ್ಲೂ ಸಮಾಜಮುಖಿಯಾಗಿ ಸೇವೆ ಮಾಡುವಂತಹ ಸ್ವಯಂಸೇವಕರು. ಸಮಾಜದಲ್ಲಿ ವ್ಯತ್ಯಾಸ ಆದಾಗ ಸಮಾಜಕ್ಕೆ ಏನಾದರೂ ಅವಶ್ಯಕತೆ ಇದ್ದಾಗ ತಾವೆಲ್ಲ ದುಡಿದ ಹಣದಿಂದ ಜೊತೆಯಾಗಿ ಒಟ್ಟಾಗಿ ಸಮಾಜಕ್ಕೆ ನೀಡುವಂತ ಒಂದು ಭಾವನೆ ಉಳ್ಳಂತಹ ಒಂದು ರಿಕ್ಷ ನಿಲ್ದಾಣದ ಚಾಲಕರು ಮತ್ತು ಮಾಲಕರು. ಕರೋನ ಸಂದರ್ಭ ಬಂದಾಗ ತಮ್ಮ ರಿಕ್ಷಾ ನಿಲ್ದಾಣದಲ್ಲಿ ಲಸಿಕೆಯ ಶಿಬಿರವನ್ನು ಮಾಡಿರುತ್ತಾರೆ. ಅಂತಹ ಅನೇಕ ಕಾರ್ಯಕ್ರಮಗಳು ಇಟ್ಟು ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದು, ಇಂದು ವ್ಯವಸಾಯ ಸೇವಾ ಸಹಕಾರಿ ಸಂಘ ಕೊಡವೂರು ಇವರು ಸೋಲಾರ್ ನೀಡುವುದರ ಮುಖಾಂತರ ರಿಕ್ಷಾ ನಿಲ್ದಾಣವನ್ನು ಚೆಂದ ಕಾಣಿಸುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ರಿಕ್ಷಾ ನಿಲ್ದಾಣದ ಸುತ್ತಲೂ ಹೂವಿನ ಚಟ್ಟಿಗಳನ್ನು ಇಟ್ಟಿರುತ್ತಾರೆ.ನೀರಿಲ್ಲದ ಸಮಯದಲ್ಲಿ ತಮ್ಮ ತಮ್ಮ ಮನೆಯಿಂದ ನೀರು ತಂದು ಆ ಗಿಡಗಳನ್ನು ಬೆಳೆಸುವಂಥಹ ಕಾರ್ಯ ಮಾಡುತ್ತಿದ್ದಾರೆ ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ನಗರಸಭಾ ಸದಸ್ಯರಾದ ವಿಜಯ ಕೊಡವೂರು ಅವರು ತಿಳಿಸಿದ್ದಾರೆ.