ಉಡುಪಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಬ್ಬರದ ಅಲೆಗಳಿಂದ ಪಡುಕೆರೆ ಸಮೀಪದ ಶಾಂತಿನಗರದ ಕಿನಾರ ಫ್ರೆಂಡ್ಸ್ ಬಳಿ ಕೊರೆತ ಉಂಟಾಗಿದೆ.
ಅದೇ ರೀತಿ ಕೇಲವೇ ದೂರದಲ್ಲಿರುವ ವೀರಾಂಜನೆಯ ಪೂಜಾ ಮಂದಿರದ ಬಳಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಈ ಹಿಂದೆ ಇಲ್ಲಿ ತಡೆಗೋಡೆಯಾಗಿ ಕಡಲ ತೀರದಲ್ಲಿ ಹಾಕಲಾದ ಮಣ್ಣಿನ ಚೀಲಗಳು ಸಮುದ್ರ ಪಾಲಾಗಿವೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ