ಬೈಂದೂರು: ಬಾವಿಯಲ್ಲಿ ದಿಢೀರ್ ಮೊಸಳೆ ಪ್ರತ್ಯಕ್ಷ; ಬಿಚ್ಚಿಬಿದ್ದ ಸ್ಥಳೀಯರು

ಉಡುಪಿ: ಬೈಂದೂರು ತಾಲೂಕಿನ ನಾಗೂರಿನ ರತ್ನಾಕರ ಉಡುಪ ಎಂಬವರ ಬಾವಿಯಲ್ಲಿ ದಿಢೀರೆಂದು ಮೊಸಳೆ ಪ್ರತ್ಯಕ್ಷವಾಗಿದ್ದು, ಇದನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದರು.

Oplus_0

ಬೈಂದೂರು ತಹಶೀಲ್ದಾರ್ ಪ್ರದೀಪ್, ಠಾಣಾಧಿಕಾರಿ ಹಾಗೂ ಆರ್.ಎಫ್.ಓ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಮೊಸಳೆ ಬಲೆಗೆ ಸಿಗದ ಕಾರಣ ಬೋನಿನಲ್ಲಿ ಕೋಳಿ ಮಾಂಸ ಹಾಕಿ ಮೊಸಳೆ ಹಿಡಿಯುವ ಪ್ರಯತ್ನ ಮುಂದುವರಿದೆ.

Oplus_0

ತೋಟದ ಸಿಹಿ ನೀರಿನ ಬಾವಿಯಲ್ಲಿ ಮೊಸಳೆ ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಈ ಭಾಗದಲ್ಲಿ ಮೊಸಳೆಗಳು ಕಾಣ ಸಿಗುವುದೇ ಅಪರೂಪ.‌ ಅಂಥದ್ದರಲ್ಲಿ ಬಾವಿಯಲ್ಲಿ ಇದು ಹೇಗೆ ಪ್ರತ್ಯಕ್ಷವಾಯಿತು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಸದ್ಯ ಕೋಳಿ ಮಾಂಸ ಹಾಕಿ ಮೊಸಳೆ ಹಿಡಿಯುವ ಯತ್ನವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ.

Oplus_0

ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ನಂತರ ಸೃಷ್ಟಿಯಾದ ನೆರೆ ಹಿನ್ನೆಲೆಯಲ್ಲಿ ಮೊಸಳೆ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಅಪರೂಪದ ಮೊಸಳೆ ನೋಡಲು ಸಾಕಷ್ಟು ಜನ ಸ್ಥಳದಲ್ಲಿ ನೆರೆದಿದ್ದಾರೆ.

Oplus_0