ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ ರೇಂಜರ್ಸ್ ಘಟಕದ ವತಿಯಿಂದ ಕಾರ್ಕಳದ ಮಿಯ್ಯಾರು ಗ್ರಾಮದಲ್ಲಿ ‘ಕೆಸರಾಟ ಪಾಠ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಿಯ್ಯಾರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಾಧವ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಿಯ್ಯಾರು ಗ್ರಾಮಕ್ಕೂ ಎನ್ಎಸ್ಎಸ್ ಚಟುವಟಿಕೆಗಳಿಗೂ
ಅವಿನಾಭಾವ ನಂಟಿದೆ. ಈ ಗ್ರಾಮದಲ್ಲಿ ಹೆಚ್ಚಿನ ಎನ್ ಎಸ್ ಎಸ್ ಕ್ಯಾಂಪ್ಗಳು ನಡೆಯುತ್ತವೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜೀವನ ಪಾಠ ಲಭಿಸಲಿ ಎಂದು ಹಾರೈಸಿದರು.
ಆಳ್ವಾಸ್ ವಿದ್ಯಾ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ರವರು
ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೆಸರಾಟದ ಮಹತ್ವ ಹಾಗೂ ಕೃಷಿಯ ಮಹತ್ವವನ್ನು ತಿಳಿಸಿದರು.ವಿವಿಧ ಆಟಗಳಲ್ಲಿ ತಾವೂ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಕೆಸರಾಟ ಪಾಠದ ಅಂಗವಾಗಿ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್, ೧೦೦ ಮೀಟರ್ ಓಟ, ೪೦೦ಮೀಟರ್ ರಿಲೇ, ಪಿರಮಿಡ್ ರಚಿಸುವುದು, ನಿಧಿ ಹುಡುಕುವುದು, ಮಡಕೆ ಒಡೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗದ್ದೆಯನ್ನು ಒದಗಿಸಿದಂತಹ ರಾಜೇಶ್ ಹಾಗೂ ಸಹಕಾರವನ್ನು ನೀಡಿದ ರಮೇಶ್ ಹೆಗ್ಡೆಯನ್ನು ಅಭಿನಂದಿಸಲಾಯಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂಡಿ, ಎನ್ಎಸ್ಎಸ್ ಘಟಕದ
ಸಂಯೋಜಕರಾದ ಧರ್ಮೇಂದ್ರ ಕುದ್ರೋಳಿ, ಸಂಸ್ಕೃತ
ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪ್ಳೂಣಕರ್ ರೋವರ್ ರೇಂಜರ್ಸ್ ಘಟಕದ ಸಂಯೋಜಕರಾದ ವೀಣಾ ಹಾಗೂ ಸುನಿಲ್,ಉಪನ್ಯಾಸಕ ವರ್ಗದವರು ಇದ್ದರು.ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೋವರ್ ರೇಂಜರ್ಸ್ ಹಾಗೂ ಎನ್ಎಸ್ಎಸ್ ಘಟಕದ 175 ವಿದ್ಯಾರ್ಥಿಗಳು ಭಾಗವಹಿಸಿದ್ದರು.