ಜೆಸಿಐ ಇಂಡಿಯಾ ಪಂಚ ರಾಜ್ಯ ವಲಯಗಳ ತರಬೇತಿ ವರ್ಕ್ ಶಾಪ್ ನಲ್ಲಿ ಉಡುಪಿಯ ಉದಯ ನಾಯ್ಕ್ ಅವರಿಗೆ ZTWS ಮೋಸ್ಟ ಟ್ರಾನ್ಸ್ಫರ್ಮೆಡ್ ಲರ್ನ್ಡ್ ಅವಾರ್ಡ್-2024 ಪ್ರಶಸ್ತಿ.

ಉಡುಪಿ: ಜೂನಿಯರ್ ಛೇಂಬರ್ ಇಂಟರ್ನ್ಯಾಷನಲ್ ಜೆಸಿಐ ಇಂಡಿಯಾ 2024 ರ ವಲಯಗಳ ಟ್ರೈನರ್ ಗಳ ತರಬೇತಿಯಲ್ಲಿ ಜೆಸಿಐ ಇಂಡಿಯಾ ಪಂಚ ರಾಜ್ಯ ವಲಯಗಳ ತರಬೇತಿ ವರ್ಕ್ ಶಾಪ್ ನಲ್ಲಿ ಕರ್ನಾಟಕ ದ ವಲಯ 15 ರ ಜೆಸಿಐ ಉಡುಪಿ ಸಿಟಿ ಯ ಪೂರ್ವ ಅಧ್ಯಕ್ಷ, ಪೂರ್ವ ವಲಯಾಧಿಕಾರಿ ಉದಯ ನಾಯ್ಕ್ ರವರಿಗೆ ZTWS ಮೋಸ್ಟ ಟ್ರಾನ್ಸ್ಫರ್ಮೆಡ್ ಲರ್ನ್ಡ್ ಅವಾರ್ಡ್ -2024.

ಉಡುಪಿ ಕಾಪು ಪ್ಯಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಾಲ್ಕು ದಿನಗಳ ತರಬೇತಿಯಲ್ಲಿ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಯುವ ಜನಾಂಗಕ್ಕೆ ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಜೆಸಿಐ ತರಬೇತುಗಾರರನ್ನು ತಯಾರು ಮಾಡುವ ಉದ್ದೇಶ ಇದಾಗಿದ್ದು ಈ ಪ್ರಯುಕ್ತ ಜೆಸಿಐ ವಲಯ 15 ರ ವಲಯಧ್ಯಕ್ಷ ನ್ಯಾಯವಾದಿ ಜೆಸಿಐ ಸೆನಾಟರ್ ಗಿರೀಶ್ ಎಸ್ ಪಿ, ಉಪಾಧ್ಯಕ್ಷ ಜೆಸಿಐ ಸೆನಾಟರ್ ದೀಪಕ್ ರಾಜ್, ಜೆಸಿಐ ಇಂಡಿಯಾ ಆಥೋರ್ ಪೈಲೋಟ್ ಜೆಸಿ ವಿನೋದ್ ಶ್ರೀಧರ್, ಜೆಸಿಐ ಇಂಡಿಯಾ ನ್ಯಾಷನಲ್ ಟ್ರೈನರ್ ಕೋ ಪೈಲೋಟ್ ಜೆಸಿ ಎನ್ ಚಂದ್ರ ಶೇಖರ್ ಹಾಗೂ ಜೆಸಿಐ ಶ್ರೀನಾಥ್ ಡಿ ವಿ, ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ಉಪಾಧ್ಯಕ್ಷ ಸನಾಥ್ ಕುಮಾರ್, ನಿರ್ದೇಶಕಿ ಹೇಮಲತಾ ಪಿ, ಜೆಸಿಐ ಕಾಪು ಘಟಕ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ ಹಾಗೂ ಪಂಚರಾಜ್ಯಗಳ ಕರ್ನಾಟಕ, ಗೋವಾ, ಕೇರಳ, ತಮಿಳ್ ನಾಡು, ಆಂಧ್ರ ವಲಯ ಗಳ ತರಬೇತಿಗೆ 20 ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ತರಬೇತುದಾರರು ಭಾಗವಹಿಸಿದರು. ಜೆಸಿಐ ವಲಯ 15 ರ ಹಲವಾರು ವಲಯ ಅಧಿಕಾರಿಗಳು ಉಪಸ್ಥಿತರಿದ್ದರು.