ಉಡುಪಿ: ಆದರ್ಶ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚಾರಿಸುತ್ತಿರುವ ಅಲೆವೂರು ಶ್ರೀ ಆದರ್ಶ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಪೌಷ್ಟಿಕ ಆಹಾರ ದಿನ ಆಚರಿಸಲಾಯಿತು.
ಕಾಲೇಜಿನ ಬಿ.ಎಸ್ಸಿ ನರ್ಸಿಂಗ್. ವಿದ್ಯಾರ್ಥಿಗಳು ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಿದ್ದರು.
ಪೌಷ್ಟಿಕ ಆಹಾರದ ಮಹತ್ವ, ಅದರಲ್ಲಿರುವ ಪೋಷಕಾಂಶಗಳು ಮತ್ತು ಅವು ದೇಹ ಬೆಳವಣಿಗೆಗೆ ಹೇಗೆ ಸಹಕಾರಿಯಾಗಬಲ್ಲವು ಎನ್ನುವ ಕುರಿತು ವಿದ್ಯಾರ್ಥಿಗಳು ಮಾಹಿತಿ ನೀಡಿದರು.ಕಾಲೇಜಿನ ಆಡಳಿತಾಧಿಕಾರಿಯಾದ ಡಾ.ಪ್ರಶಾಂತ್ ಪಿ. ಆದರ್ಶ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ. ರಂಜಿತಾ ಎಸ್ ನಾಯಕ್ ಅವರು ವಿದ್ಯಾರ್ಥಿಗಳು ತಯಾರಿಸಿದ ತಿನಿಸುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲೆ ಸುಧೀನಾ, ಕಾಲೇಜಿನ ಉಪ ಪ್ರಾಂಶುಪಾಲೆ ಯಶೋಧ ಸಾಲ್ಯಾನ್, ಶ್ರೀ ಆದರ್ಶ ಪ್ಯಾರ ಮೆಡಿಕಲ್ ಕಾಲೇಜ್ ಹಾಗೂ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲರಾದ ಡಾ. ರವಿ ಕುಮಾರ್ ಟಿ. ಎನ್ ಅಧ್ಯಾಪಕರಾದ ವಿನಯ, ಶೀತಲ್, ಕೃಪಾ, ದಿವ್ಯಾಶೆಟ್ಟಿ, ವಿಜಯಲಕ್ಷ್ಮಿ, ಭಾರತಿ, ಪಥ್ಯಹಾರ ತಜ್ಞೆಯಾದ ಅನುಶ್ರೀ ಉಪಸ್ಥಿತರಿದ್ದರು.