ಉಡುಪಿ: ಮಾನ್ಯತೆ ಹೊಂದಿರುವ ಜಿಲ್ಲೆಯ ಅನುದಾನಿತ ಹಾಗೂ ಅನುದಾನರಹಿತ ಐ.ಟಿ.ಐ ಶಿಕ್ಷಣ ಸಂಸ್ಥೆಗಳ ವಿವರ.

ಉಡುಪಿ: ಭಾರತ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ಒಂದು ವರ್ಷ ಹಾಗೂ ಎರಡು ವರ್ಷ ಅವಧಿಯ ರಾಷ್ಟ್ರೀಯ ಮಟ್ಟದ ತರಬೇತಿಯ ಯೋಜನೆಯನ್ನು ರೂಪಿಸಿದೆ. ಇದು ಶಾಶ್ವತ ಸಂಯೋಜನೆಯನ್ನು ಹೊಂದಿ ಅದರ ನಿಯಮಾನುಸಾರ ಪ್ರವೇಶ, ತರಬೇತಿ, ಪರೀಕ್ಷೆ ಹಾಗೂ ಉದ್ಯೋಗ ಕಲ್ಪಿಸುವ ಯೋಜನೆಯಾಗಿದೆ.

ತರಬೇತಿ ಅವಧಿಯಲ್ಲಿ ನಡೆಯುವ ಪ್ರತೀ ಪರೀಕ್ಷೆಗೂ ಕೇಂದ್ರ ಸರ್ಕಾರದಿಂದ ಅಂಕಪಟ್ಟಿ ಹಾಗೂ ಕೊನೆಯಲ್ಲಿ ”ರಾಷ್ಟ್ರೀಯ ವೃತ್ತ್ತಿ ಪ್ರಮಾಣ ಪತ್ರ” ನೀಡಲಾಗುತ್ತದೆ. ಅಂತಹ ಅಭ್ಯರ್ಥಿಗಳಿಗೆ ರಾಜ್ಯ, ರಾಷ್ಟ್ರ, ಹೊರ ರಾಷ್ಟ್ರಗಳಲ್ಲಿ ತಾಂತ್ರಿಕತೆ ಮೇಲೆ ವಿಫುಲ ಉದ್ಯೋಗ ಹಾಗೂ ಸ್ವಉದ್ಯೋಗವಕಾಶಗಳು ಲಭ್ಯವಿದೆ.
ಎಸ್.ಎಸ್.ಎಲ್.ಸಿ ಉತ್ತೀರ್ಣ / ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಐಟಿಐಗಳಲ್ಲಿ ಒಂದು ವರ್ಷ ಅವಧಿಯ ವೆಲ್ಡರ್ ತರಬೇತಿ ಮಾತ್ರ ಅವಕಾಶ ಇರುತ್ತದೆ. ಅದರಲ್ಲೂ ಎಸ್.ಎಸ್.ಎಲ್.ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲೆಯಲ್ಲಿ ವೆಲ್ಡರ್ ಕೋರ್ಸ್ ಹೊರತಾಗಿ ಯಾವುದೇ ಕೋರ್ಸುಗಳು ಇರುವುದಿಲ್ಲ. ಕೆಲವು ಅನಧೀಕೃತ ಸಂಸ್ಥೆಗಳು ಐಟಿಐ ಹೆಸರಿನಲ್ಲಿ ರೂ. 20000-25000 ದವರೆಗೆ ಶುಲ್ಕ ವಸೂಲಿ ಮಾಡಿ, ಒಂದೇ ವರ್ಷಕ್ಕೆ ಎ.ಸಿ. ಮೆಕ್ಯಾನಿಕ್, ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ಕೋರ್ಸ್ ಮಾಡಿ ಆ ಸಂಸ್ಥೆಯವರೇ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ಮುಂದೆ ಉದ್ಯೋಗಕ್ಕೆ ಸೇರಲು ಈ ಸರ್ಟಿಫಿಕೇಟುಗಳು ಮಾನ್ಯತೆ ಪಡೆದಿರುವುದಿಲ್ಲ. ಅಲ್ಲದೆ, ಆ ಸಂಸ್ಥೆಗಳಲ್ಲಿ ವರ್ಕ್‌ ಶಾಪ್ ಗಳು ಮೆಶಿನರಿಗಳು ಇರುವುದಿಲ್ಲ.
ಉಡುಪಿ ಜಿಲ್ಲೆಯ ಸರಕಾರಿ ಐ.ಟಿ.ಐಗಳನ್ನು ಹೊರತುಪಡಿಸಿ ಮಾನ್ಯತೆ ಹೊಂದಿರುವ ಅನುದಾನಿತ ಹಾಗೂ ಅನುದಾನರಹಿತ ಐ.ಟಿ.ಐ ಶಿಕ್ಷಣ ಸಂಸ್ಥೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಅನುದಾನಿತ ಐಟಿಐಗಳು:

  1. ನ್ಯಾಷನಲ್ ಐಟಿಐ ಬಾರ್ಕೂರು, ಉಡುಪಿ ಜಿಲ್ಲೆ
  2. ರೆವೆರಂಡ್ ಫಾದರ್ ರೋಬಟ್ ಜೆಡ್ ಮೆಮೋರಿಯಲ್ ಐಟಿಐ ನಾಡ ಕುಂದಾಪುರ. ಉಡುಪಿ ಜಿಲ್ಲೆ
  3. ಸೈಂಟ್ ಮೇರಿಸ್ ಐಟಿಐ ಚಿಟ್ಪಾಡಿ, ಉಡುಪಿ ಜಿಲ್ಲೆ
  4. ಟ್ರಿನಿಟಿ ಐಟಿಐ ಉದ್ಯಾವರ, ಉಡುಪಿ ಜಿಲ್ಲೆ

ಅನುದಾನ ರಹಿತ ಐಟಿಐ:

  1. ಶ್ರೀ ಆತ್ಮಾನಂದ ಸರಸ್ವತಿ ಐಟಿಐ. ಬಿಲ್ಲಾಡಿ, ಉಡುಪಿ ಜಿಲ್ಲೆ.

ಉಡುಪಿ ಜಿಲ್ಲೆಯಲ್ಲಿ ಈ ಮೇಲಿನ ಸಂಸ್ಥೆಗಳ ಹೊರತಾಗಿ ಐಟಿಐ ಹೆಸರನ್ನು ನಮೂದಿಸಿರುವ ಸಂಸ್ಥೆಗಳು ಅನಧೀಕೃತ ಸಂಸ್ಥೆಗಳಾಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಮೋಸಹೋಗಬಾರದು ಎಂದು ವಿನಂತಿ.